ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣವಿಲ್ಲದ್ದಕ್ಕೆ ಬೈಕ್‌ನಲ್ಲಿ ತಾಯಿಯ ಮೃತ ದೇಹ ಸಾಗಿಸಿದ ಯುವಕ

Last Updated 1 ಆಗಸ್ಟ್ 2022, 14:48 IST
ಅಕ್ಷರ ಗಾತ್ರ

ಶಹದೋಲ್: ಮಧ್ಯಪ್ರದೇಶದಲ್ಲಿ ಯುವಕನೊಬ್ಬ 80 ಕಿ.ಮೀಟರ್ ದೂರ ಬೈಕ್‌ನ ಹಿಂಬದಿ ಸೀಟಿನಲ್ಲಿ ತಾಯಿಯ ಮೃತದೇಹ ಸಾಗಿಸಿರುವ ಘಟನೆ ನಡೆದಿದೆ.

ಮೃತದೇಹವನ್ನು ತಮ್ಮ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್ ಹಾಗೂ ಇತರೆ ಖಾಸಗಿ ವಾಹನ ಚಾಲಕರು ಹೆಚ್ಚು ಮೊತ್ತ ಕೇಳಿದ್ದರಿಂದ ಇಷ್ಟೊಂದು ಹಣ ಹೊಂದಿಸಲಾಗದೇ ಯುವಕಬೈಕ್‌ನಲ್ಲೇ ಮೃತದೇಹವನ್ನಿಟ್ಟು ಸ್ವಗ್ರಾಮಕ್ಕೆ ಸಾಗಿಸಿದ್ದಾನೆ.

ಇಲ್ಲಿನ ಗೋದಾರು ಗ್ರಾಮದ ಬುಡಕಟ್ಟು ಮಹಿಳೆ ಜೈಮಂತ್ರಿ ಯಾದವ್ ಎದೆ ನೋವಿನಿಂದ ಬಳಲುತ್ತಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್‌ ಮತ್ತು ಇತರೆ ವಾಹನಗಳ ಚಾಲಕರು ₹ 5 ಸಾವಿರ ಕೇಳಿದ್ದರು.

ಇಷ್ಟೊಂದು ಹಣ ತನ್ನಲ್ಲಿ ಇಲ್ಲದ ಕಾರಣ, ಯುವಕ ತಾಯಿಯ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT