ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ದಾಳಿ: ₹1 ಸಾವಿರ ಕೋಟಿ ಬೋಗಸ್ ಖರ್ಚು ತೋರಿಸಿದ ಹೀರೊ ಮೋಟೊಕಾರ್ಪ್!

Last Updated 29 ಮಾರ್ಚ್ 2022, 10:26 IST
ಅಕ್ಷರ ಗಾತ್ರ

ನವದೆಹಲಿ: ಆದಾಯ ತೆರಿಗೆ ಇಲಾಖೆ ಹೀರೊ ಮೋಟೊಕಾರ್ಪ್‌ ಮೇಲೆ ನಡೆಸಿದ ದಾಳಿಯ ಭಾಗವಾಗಿ ತಪಾಸಣೆ ಮುಂದುವರೆಸಿದ್ದು, ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ.

ಆಟೊಮೊಬೈಲ್ ಕ್ಷೇತ್ರದ ದೈತ್ಯ ಕಂಪನಿಯೊಂದು ಬರೋಬ್ಬರಿ ₹1 ಸಾವಿರ ಕೋಟಿ ಬೋಗಸ್ ಖರ್ಚು ತೋರಿಸಿ ಆದಾಯ ತೆರಿಗೆ ಇಲಾಖೆಯನ್ನು ವಂಚಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಸುದ್ದಿಸಂಸ್ಥೆ ಎಎನ್‌ಐ, ಹೀರೊ ಮೋಟೊಕಾರ್ಪ್‌ ₹1 ಸಾವಿರ ಕೋಟಿ ಖರ್ಚಾಗಿರುವುದಕ್ಕೆ ಸುಳ್ಳು ದಾಖಲೆಗಳನ್ನು ಒದಗಿಸಿದೆ. ಅಸಲಿಗೆ ಅಷ್ಟು ಹಣವನ್ನು ಕಂಪನಿ ಖರ್ಚು ಮಾಡಿಲ್ಲ ಎಂಬುದಾಗಿ ಐಟಿ ಇಲಾಖೆ ತಿಳಿಸಿರುವುದಾಗಿ ಹೇಳಿದೆ.ಅಲ್ಲದೇ ದೆಹಲಿಯ ಹೊರವಲಯದ ಚತ್ರಪುರ್ ಬಳಿ ಸುಮಾರು ₹100 ಕೋಟಿ ಮೌಲ್ಯದ ಫಾರ್ಮ್‌ಹೌಸ್‌ನ್ನು ಹೀರೊ ಇಂಡಿಯಾದವರು ಕಪ್ಪು ಹಣದ ರೂಪದಲ್ಲಿ ನಗದು ಹಣ ನೀಡಿ ಖರೀದಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ.

ಕಳೆದ ವಾರ ಹೀರೊ ಮೋಟೊಕಾರ್ಪ್‌ ಅಧ್ಯಕ್ಷ ಪವನ್ ಮುಂಜಾಲ್ ಅವರ ಮನೆ ಹಾಗೂ ಹೀರೊ ಕಂಪನಿ ದೆಹಲಿ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT