ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂದಣಿ ತಪ್ಪಿಸಲು ಪ್ಲಾಟ್‌ಫಾರ್ಮ್ ಟಿಕೆಟ್‌ ದರ ಏರಿಕೆ: ರೈಲ್ವೆ ಸ್ಪಷ್ಟನೆ

Last Updated 5 ಮಾರ್ಚ್ 2021, 16:02 IST
ಅಕ್ಷರ ಗಾತ್ರ

ನವದೆಹಲಿ: ‘ರೈಲ್ವೆ ಫ್ಲಾಟ್‌ಫಾರ್ಮ್‌ ಟಿಕೆಟ್‌ ದರ ಏರಿಕೆಯು ‘ತಾತ್ಕಾಲಿಕ’. ನಿಲ್ದಾಣಗಳಲ್ಲಿ ಜನದಟ್ಟಣೆ ತಪ್ಪಿಸುವುದಷ್ಟೇ ಇದರ ಉದ್ದೇಶ‘ ಎಂದು ರೈಲ್ವೆ ಇಲಾಖೆಯು ಶುಕ್ರವಾರ ಸ್ಪಷ್ಟನೆ ನೀಡಿದೆ.

ಕೆಲ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್‌ ದರವನ್ನು ಇತ್ತೀಚೆಗೆ ₹50ಗೆ ಹೆಚ್ಚಿಸಲಾಗಿತ್ತು. ಕಡಿಮೆ ಅಂತರದ ರೈಲ್ವೆ ಪ್ರಯಾಣ ದರ ಏರಿಕೆ ಹಿಂದೆಯೇ ಇಲಾಖೆಯು ಈ ಕ್ರಮ ಕೈಗೊಂಡಿತ್ತು.

ದರ ಏರಿಕೆ ಉದ್ದೇಶ ಕೋವಿಡ್‌ ಹಿನ್ನೆಲೆಯಲ್ಲಿ ನಿಲ್ದಾಣಗಳಲ್ಲಿ ಜನದಟ್ಟಣೆ ತಪ್ಪಿಸುವುದೇ ಆಗಿದೆ. ಸೀಮಿತ ಸಂಖ್ಯೆಯ ನಿಲ್ದಾಣಗಳಲ್ಲಿ ಮಾತ್ರವೇ ಇದು ಜಾರಿಗೆ ಬಂದಿದೆ. ಮುಂಬೈ ವಿಭಾಗದಲ್ಲಿ 78 ನಿಲ್ದಾಣಗಳಿದ್ದು, ಏಳು ನಿಲ್ದಾಣಗಳಲ್ಲಿ ಪರಿಷ್ಕೃತ ದರ ಜಾರಿಯಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT