ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಚಲ ಪ್ರದೇಶಕ್ಕೆ ಬರುವ ರಾಷ್ಟ್ರಪತಿ ಭೇಟಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

Last Updated 13 ಸೆಪ್ಟೆಂಬರ್ 2021, 16:47 IST
ಅಕ್ಷರ ಗಾತ್ರ

ಶಿಮ್ಲಾ: ಹಿಮಾಚಲ ಪ್ರದೇಶಕ್ಕೆ ಆಗಮಿಸಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಭೇಟಿಯಾಗಲಿರುವ ಮುಖ್ಯಮಂತ್ರಿ ಜೈ ರಾಮ್‌ ಠಾಕೂರ್‌ ಮತ್ತು ಇತರರು ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋವಿಂದ್‌ ಅವರು ಸೆಪ್ಟೆಂಬರ್‌16 ರಿಂದ 20ರ ವರೆಗೆ ಹಿಮಾಚಲ ಪ್ರದೇಶದಲ್ಲಿರಲಿದ್ದಾರೆ.

ಈ ವೇಳೆ ಅವರನ್ನು ಭೇಟಿ ಮಾಡಲಿರುವ ಮುಖ್ಯಮಂತ್ರಿ ಮತ್ತು ಇತರರು ಕೋವಿಡ್‌ ಮಾರ್ಗಸೂಚಿ ಪ್ರಕಾರ ನೆಗೆಟಿವ್‌ ವರದಿ ಹೊಂದಿರುವುದು ಅಗತ್ಯವಾಗಿದೆ.ಪೊಲೀಸ್‌ ಸಿಬ್ಬಂದಿ, ವಿಮಾನ ನಿಲ್ದಾಣದ ಅಧಿಕಾರಿಗಳು, ವಿಧಾನಸಭೆ ಸದಸ್ಯರು ಮತ್ತು ಸಿಬ್ಬಂದಿ, ಶಿಮ್ಲಾ ಹೊರವಲಯದಲ್ಲಿ ಅಧ್ಯಕ್ಷರು ಉಳಿದುಕೊಳ್ಳುವ ಛಾರಬ್ರಾದಲ್ಲಿನ ಸಿಬ್ಬಂದಿಯೂ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಆರ್‌ಟಿಪಿಸಿಆರ್‌ನೆಗೆಟಿವ್‌ ವರದಿ ಹೊಂದಿರುವವರಿಗೆ ಮಾತ್ರವೇ ರಾಷ್ಟ್ರಪತಿಯನ್ನು ಭೇಟಿ ಮಾಡುವ ಅವಕಾಶ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶ ಆರೋಗ್ಯ ಇಲಾಖೆಯು, ಪ್ರವಾಸೋದ್ಯಮ ಇಲಾಖೆ, ವಿಧಾನಸಭೆ ಸಿಬ್ಬಂದಿ ಸೇರಿದಂತೆ ರಾಷ್ಟ್ರಪತಿಗಳ ಸಂಪರ್ಕಕ್ಕೆ ಬರಬಹುದಾದಎಲ್ಲರಿಗೂ ಸೋಮವಾರದಿಂದಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸುತ್ತಿದೆ. ಸೆಪ್ಟೆಂಬರ್‌15ರವರೆಗೆ ಪರೀಕ್ಷೆ ಮುಂದುವರಿಸಲಿದೆ.24 ಗಂಟೆಯೊಳಗೆಪರೀಕ್ಷೆಯ ವರದಿಗಳು ಬರಲಿದ್ದು,72 ಗಂಟೆಗಳವರೆಗೆ ಮಾನ್ಯತೆ ಹೊಂದಿರಲಿವೆ ಎಂದು ಹೇಳಿದ್ದಾರೆ.

ಮುಂದುವರಿದು,ರಾಷ್ಟ್ರಪತಿಗಳು ಉಳಿದುಕೊಳ್ಳಲಿರುವ ನಿವಾಸದನಾಲ್ವರು ಸಿಬ್ಬಂದಿಗೆ ಸೋಂಕು ಇರುವುದು ಖಚಿತವಾಗಿದೆ. ಅವರನ್ನು ಮತ್ತು ಅವರ ಸಂಪರ್ಕಕ್ಕೆ ಬಂದಿರುವ ಎಲ್ಲರನ್ನೂ ಕ್ವಾರಂಟೈನ್‌ನಲ್ಲಿರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೋವಿಂದ್‌ ಅವರು,ಹಿಮಾಚಲ ಪ್ರದೇಶ ರಾಜ್ಯ ಸ್ಥಾನಮಾನ ಪಡೆದ ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಸೆಪ್ಟೆಂಬರ್‌17 ರಂದು ಮಾತನಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT