‘ಪೃಕೃತಿಯಿಲ್ಲದೇ ಜೀವನವಿಲ್ಲ‘ ಎಂದ ಮರುಕ್ಷಣವೇ ಪ್ರಕೃತಿ ವಿಕೋಪಕ್ಕೆ ಬಲಿಯಾದಳು..!

ಶಿಮ್ಲಾ: ಕಳೆದ ಎರಡು ದಿನದ ಹಿಂದೆ ಹಿಮಾಚಲ ಪ್ರದೇಶದ ಕಿನ್ನೂರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಭೂಕುಸಿತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯಲ್ಲಿ ಜೈಪುರದ ಆಯುರ್ವೇದ ವೈದ್ಯೆ ದೀಪಾ ಶರ್ಮಾ (34) ಸೇರಿದಂತೆ 9 ಜನ ಮೃತಪಟ್ಟಿದ್ದರು.
ವಿಶೇಷವೆಂದರೆ ದೀಪಾ ಶರ್ಮಾ ಅವರು ತಮ್ಮ ಸಾವಿನ ಕೆಲವೇ ನಿಮಿಷಗಳ ಮುಂಚೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಫೋಸ್ಟ್‌ಗಳನ್ನು ನೋಡಿ ಹಲವರು ಕಂಬನಿ ಮಿಡಿಯುವಂತಾಗಿದೆ.
ದೀಪಾ ಶರ್ಮಾ ಅವರು ಜೈಪುರದಲ್ಲಿ ವೈದ್ಯಕೀಯ ಸೇವೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲೂ ಗುರುತಿಸಿಕೊಂಡಿದ್ದರು. ಜೂ 22 ರಂದು ಒಬ್ಬಂಟಿಯಾಗಿ ಅವರು ಹಿಮಾಚಲ ಪ್ರದೇಶ ಪ್ರವಾಸ ಕೈಗೊಂಡಿದ್ದರು.
ಜೂನ್ 24 ರಂದು ಕನ್ನೂರ್ ಜಿಲ್ಲೆಯ ಸಂಗಲ್ ಕಣಿವೆಯ ರಮಣಿಯ ಪ್ರವಾಸದಲ್ಲಿ ಅವರಿದ್ದರು. ಆ ದಿನವೇ ಅವರ ಜನ್ಮ ದಿನವಿತ್ತು. ತಾವು ತೆಗೆದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಅವರು, "Life is nothing without mother nature"' (ಪೃಕೃತಿಯಿಲ್ಲದೇ ಜೀವನವಿಲ್ಲ) ಎಂದು ಬರೆದುಕೊಂಡಿದ್ದರು.
ಅಂದು ಸಂಭವಿಸಿದ ಭೂಕುಸಿತದ ಸ್ಥಳದಲ್ಲಿ ಅವರು ಕ್ಯಾಮೆರಾ ಹಿಡಿದು ಫೋಟೊ ತೆಗೆಯುತ್ತಿದ್ದರು. ಆಗ ದೊಡ್ಡ ಕಲ್ಲು ಬಂಡೆ ಅಪ್ಪಳಿಸಿ ದೀಪಾ ಶರ್ಮಾ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
Valley bridge Batseri in Sangal valley of Kinnaur collapses: Nine tourists from Delhi NCR are reported to be dead and three others are seriously injured pic.twitter.com/gTQNJ141v5
— DD News (@DDNewslive) July 25, 2021
ಪೃಕೃತಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ದೀಪಾ ಶರ್ಮಾ ಅವರು ಅದೇ ಪೃಕೃತಿಯ ವಿಕೋಪದಿಂದ ಮರಣ ಹೊಂದಿದ್ದು ದುರಂತವೇ ಸರಿ.
Life is nothing without mother nature. ❤️ pic.twitter.com/5URLVYJ6oJ
— Dr.Deepa Sharma (@deepadoc) July 24, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.