ಮಂಗಳವಾರ, ಆಗಸ್ಟ್ 16, 2022
29 °C
ಹಿಂದೂ–ಅಮೆರಿಕನ್ ಸಮುದಾಯದವರಲ್ಲಿ ಜೋ ಬೈಡನ್ ತಂಡದ ಮನವಿ

ಜಾರ್ಜಿಯಾ ಸೆನೆಟ್‌ ಚುನಾವಣೆ: ಡೆಮಾಕ್ರಟಿಕ್ ಅಭ್ಯರ್ಥಿಗಳನ್ನು ಬೆಂಬಲಿಸಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಜಾರ್ಜಿಯಾ ಕ್ಷೇತ್ರದಲ್ಲಿ ಜನವರಿ 5ರಂದು ನಡೆಯಲಿರುವ ಸೆನೆಟ್‌ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡನ್ ತಂಡದ ಹಿಂದೂ –ಅಮೆರಿಕನ್‌ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳ ಬೆಂಬಲಿಗರು, ಜಾರ್ಜಿಯಾದ ಹಿಂದೂ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ. 

ಇತ್ತೀಚೆಗೆ ಜಾರ್ಜಿಯಾದಲ್ಲಿ ಹಿಂದೂ–ಅಮೆರಿಕನ್‌ ಜನಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಸುಮಾರು 1 ಲಕ್ಷದಷ್ಟು ಮಂದಿ ಭಾರತ, ನೇಪಾಳ, ಗಯಾನಾ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ದೇಶದ ಜನರು ಇದ್ದಾರೆ. ಇವರಲ್ಲಿ ಹೆಚ್ಚಿನವರು ಮೆಟ್ರೊಪಾಲಿಟನ್ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಉಳಿದಂತೆ ಸವನ್ನಾ, ಮ್ಯಾಕಾನ್ ಮತ್ತು ರಾಜ್ಯದ ನೈರುತ್ಯ ಭಾಗಗಳಲ್ಲಿದ್ದಾರೆ.

‘ಜಾರ್ಜಿಯಾದಲ್ಲಿರುವ ಹಿಂದೂಗಳು ಎಲ್ಲರನ್ನೂ ಒಳಗೊಳ್ಳುವಿಕೆಯ ಜತೆಗೆ ಬಹುತ್ವಕ್ಕಾಗಿ ಹೋರಾಡುವಂತಹ ಸೆನಟರ್‌ಗಳನ್ನು ಆಯ್ಕೆ ಮಾಡಬೇಕು. ರಾಜ್ಯವನ್ನು ಪುನಃ ವರ್ಣಬೇಧ ನೀತಿ, ಕ್ಸೆನೊಫೊಬಿಯಾದಂತಹ ಕರಾಳ ದಿನಗಳತ್ತ ಕೊಂಡೊಯ್ಯು ವುದಿಲ್ಲ ಎನ್ನುವಂತಹ ಸೆನೆಟರ್‌ಗಳನ್ನು ಬೆಂಬಲಿಸಬೇಕು‘ ಎಂದು ಬೈಡನ್ ಹಿಂದೂ–ಅಮೆರಿಕನ್ ಸಂಘಟನೆಯ ಸಹ ಅಧ್ಯಕ್ಷೆ ಸೋಹಿನಿ ಸಿರ್ಕಾರ್‌ ಹೇಳಿದರು.

ಸೆನೆಟ್ ಚುನಾವಣೆಯಲ್ಲಿ ಜಾನ್‌ ಒಸಾಫ್ ಮತ್ತು ರೆವರೆಂಡ್ ರಾಫೆಲ್ ವಾರ್ನಾಕ್ ಎಂಬುವವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು