ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರಂಗಾ ಯಾತ್ರೆಯಲ್ಲಿ ಗೋಡ್ಸೆ ಚಿತ್ರ: ಹಿಂದೂ ಮಹಾಸಭಾ ಸಮರ್ಥನೆ

Last Updated 16 ಆಗಸ್ಟ್ 2022, 15:36 IST
ಅಕ್ಷರ ಗಾತ್ರ

ಮುಜಾಫರ್‌ನಗರ: ಹಿಂದೂ ಮಹಾಸಭಾದ ಸ್ಥಳೀಯ ಘಟಕವು ಸ್ವಾತಂತ್ರ್ಯೋತ್ಸವದ ತಿರಂಗಾ ಯಾತ್ರೆಯ ವೇಳೆ ಗಾಂಧೀಜಿ ಹತ್ಯೆ ಮಾಡಿದ್ದ ನಾಥೂರಾಂ ಗೋಡ್ಸೆ ಭಾವಚಿತ್ರಗಳನ್ನು ಒಯ್ದಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೊ ಜಾಲತಾಣಗಳಲ್ಲಿ ಹೆಚ್ಚು ಹಂಚಿಕೆಯಾಗಿದೆ.

ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ವರ್ಮಾ ಅವರು, ನಮ್ಮ ಕಾರ್ಯಕರ್ತರು ತಿರಂಗಾ ಯಾತ್ರೆಯ ವೇಳೆ ಅನೇಕ ಕ್ರಾಂತಿಕಾರಿಗಳ ಚಿತ್ರಗಳನ್ನು ಒಯ್ದಿದ್ದರು. ಈ ಚಿತ್ರಗಳಲ್ಲಿ ಗೋಡ್ಸೆ ಚಿತ್ರವೂ ಸೇರಿತ್ತು ಎಂದು ಪ್ರತಿಕ್ರಿಯಿಸಿದರು.

ದೇಶಕ್ಕೆ ವಿರುದ್ಧವಾಗಿದ್ದ ಮಹಾತ್ಮಗಾಂಧಿ ಅವರ ನೀತಿಗಳ ವಿರುದ್ಧ ಗೋಡ್ಸೆ ಕ್ರಮಕೈಗೊಂಡಿದ್ದರು ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT