ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಐವಿ ಸೋಂಕಿತರಿಗೆ ಉಚಿತ ವೈದ್ಯಕೀಯ ಸೌಲಭ್ಯ; ಹರಿಯಾಣ ಸರ್ಕಾರ

Last Updated 4 ಜುಲೈ 2022, 16:21 IST
ಅಕ್ಷರ ಗಾತ್ರ

ಚಂಡೀಗಡ: ಎಚ್‌ಐವಿ ಸೋಂಕಿತರಿಗೆ ಪ್ರಯೋಗಾಲಯ ಮತ್ತು ವಿಕಿರಣ ಪರೀಕ್ಷೆಯಂತಹ ಆರೋಗ್ಯ ಸೌಲಭ್ಯಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಉಚಿತವಾಗಿ ಒದಗಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ.

ಪಿಪಿಪಿ ಮಾದರಿಯಲ್ಲಿ ಸದ್ಯ ಹಲವು ರೀತಿಯ ಉಚಿತ ವೈದ್ಯಕೀಯ ಸೌಲಭ್ಯ ಪಡೆಯುತ್ತಿರುವ ಏಳು ವರ್ಗಗಳ ಪಟ್ಟಿಗೆ ಎಚ್‌ಐವಿ ಸೋಂಕಿತರನ್ನೂ ಸೇರಿಸಲಾಗಿದೆ. ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ಮನೋಹರ್‌ ಲಾಲ್ ಖಟ್ಟರ್‌ ಅವರು ಅನುಮೋದನೆ ನೀಡಿದ್ದಾರೆ ಎಂದು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.

ಎಚ್‌ಐವಿ ಸೋಂಕಿತರಿಗೆ ಅಲ್ಟ್ರಾಸೌಂಡ್‌, ಸಿಟಿ ಸ್ಕ್ಯಾನ್‌, ಎಂಆರ್‌ಐ ಸೇರಿದಂತೆ ಎಲ್ಲ ಪ್ರಯೋಗಾಲಯ ಮತ್ತು ವಿಕಿರಣ ಪರೀಕ್ಷೆಯಂತಹ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಉಚಿತವಾಗಿ ಸಿಗಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬಡತನ ರೇಖೆಗಿಂತ ಕೆಳಗಿರುವ ಮತ್ತು ನಗರ ಕೊಳಗೇರಿಯಲ್ಲಿ ವಾಸಿಸುವ ರೋಗಿಗಳು, ರಾಜ್ಯ ಸರ್ಕಾರದಿಂದ ಅಂಗವಿಕಲ ಭತ್ಯೆ ಪಡೆಯುತ್ತಿರುವವರು, ಪರಿಶಿಷ್ಟ ಜಾತಿಗೆ ಸೇರಿದ ರೋಗಿಗಳು, ಆರ್ಥಿಕವಾಗಿ ಹಿಂದುಳಿದ ವರ್ಗದವರು, ರಸ್ತೆ ಅಪಘಾತಕ್ಕೆ ತುತ್ತಾದವರು ಮತ್ತು ಸರ್ಕಾರಿ ನೌಕರರು ಹಾಗೂ ಪಿಂಚಿಣಿದಾರರಿಗೆ ಸದ್ಯ ಪಿಪಿಪಿ ಮಾದರಿಯಲ್ಲಿ ಉಚಿತವಾಗಿ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೀಗ ಈ ಪಟ್ಟಿಗೆ ಎಚ್‌ಐವಿ ಸೋಂಕಿತರನ್ನೂ ಸೇರಿಸಲಾಗುತ್ತದೆ.

ಸದ್ಯ ಎಚ್‌ಐವಿಯಿಂದ ಬಳಲುತ್ತಿರುವ 22 ಸಾವಿರ ಮಂದಿ 'ಆಂಟಿರೆಟ್ರೊವೈರಲ್‌ ಥೆರಪಿ' ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT