ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶೀಯರ ಬಂಧನ ಮಾಹಿತಿ ರವಾನೆಗೆ ನೂತನ ಮಾರ್ಗಸೂಚಿ

Last Updated 7 ಡಿಸೆಂಬರ್ 2020, 6:47 IST
ಅಕ್ಷರ ಗಾತ್ರ

ನವದೆಹಲಿ: 'ರಾಜ್ಯ ಸರ್ಕಾರಗಳು ವಿದೇಶಿಯರನ್ನು ವಶಕ್ಕೆ ಪಡೆದ ಅಥವಾ ಬಂಧಿಸಿದ ಸಂದರ್ಭದಲ್ಲಿ ಆ ಮಾಹಿತಿಯನ್ನು ಆಯಾ ದೇಶಗಳ ರಾಯಭಾರ ಕಚೇರಿ ಅಥವಾ ಎಂಬೆಸಿಗಳಿಗೆ ನೇರವಾಗಿ ನೀಡುವಂತಿಲ್ಲ. ಬದಲಿಗೆ ವಿದೇಶಾಂಗ ಸಚಿವಾಲಯದ ಮೂಲಕ ನೀಡಬೇಕು' ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ. ಈ ಸಂಬಂಧ ನೂತನ ಮಾರ್ಗಸೂಚಿಗಳನ್ನು ಸಚಿವಾಲಯವು ಹೊರಡಿಸಿದೆ.

ಗೃಹ ಸಚಿವಾಲಯವು ಈ ಸಂಬಂಧ ದೇಶದ ಎಲ್ಲಾ ಪೊಲೀಸ್ ಇಲಾಖೆಗಳಿಗೆ ಮತ್ತು ಜೈಲು ನಿರ್ವಹಣಾ ಪ್ರಾಧಿಕಾರಗಳಿಗೆ ಪತ್ರ ಬರೆದಿದೆ.ಪೊಲೀಸರ ಬಂಧನದಲ್ಲಿ ಅಥವಾ ವಶದಲ್ಲಿ ಇರುವ ವಿದೇಶೀಯರ ಬಗ್ಗೆ ಆಯಾ ದೇಶದ ರಾಯಭಾರ ಕಚೇರಿಗಳಿಗೆ ಅಥವಾ ಎಂಬೆಸಿಗಳಿಗೆ ಮಾಹಿತಿ ನೀಡುವ ಸಂಬಂಧ ಇದೇ ಆಗಸ್ಟ್‌ನಲ್ಲಿ ಗೃಹ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಆ ಮಾರ್ಗಸೂಚಿಗಳಲ್ಲಿ ಈಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.

ವಿದೇಶಿಯರನ್ನು ವಶಕ್ಕೆ ಪಡೆದ ಅಥವಾ ಬಂಧಿಸಿದ, ತಕ್ಷಣವೇ ಆ ಸಂಬಂಧ ಭಾರತೀಯ ವಿದೇಶಾಂಗ ಸಚಿವಾಲಯ ಮತ್ತು ಗೃಹ ಸಚಿವಾಲಯಕ್ಕೆ ಲಿಖಿತ ಮಾಹಿತಿ ನೀಡಬೇಕು. ಮಾಹಿತಿಯನ್ನು ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ನೀಡುವಲ್ಲಿ ಯಾವುದೇ ರೀತಿಯ ವಿಳಂಬ ಆಗಬಾರದು

ಬಂಧನದಲ್ಲಿ ಅಥವಾ ವಶದಲ್ಲಿ ಇರುವ ವಿದೇಶಿಯರು ಮನವಿ ಮಾಡಿಕೊಂಡರೆ ಮಾತ್ರ, ಅವರ ದೇಶದ ರಾಯಭಾರ ಕಚೇರಿ ಅಥವಾ ಎಂಬೆಸಿಗೆ ಮಾಹಿತಿ ನೀಡಬೇಕು. ಈ ಸ್ವರೂಪದ ಮನವಿಗಳು ಇಲ್ಲದೇ ಇದ್ದರೆ, ಅವರ ಎಂಬೆಸಿ ಅಥವಾ ರಾಯಭಾರ ಕಚೇರಿಗೆ ಮಾಹಿತಿ ನೀಡುವ ಅವಶ್ಯಕತೆ ಇಲ್ಲ. ವಿದೇಶಾಂಗ ಸಚಿವಾಲಯದ ಮೂಲಕವೇ ಈ ಮಾಹಿತಿ ನೀಡಬೇಕು

ವಿದೇಶಾಂಗ ಸಚಿವಾಲಯದ ಕಾನ್ಸುಲರ್, ಪಾಸ್‌ಪೋರ್ಟ್ ಮತ್ತು ವೀಸಾ ವಿಭಾಗಕ್ಕೂ (ಸಿಪಿವಿ ವಿಭಾಗ) ಈ ಮಾಹಿತಿಯನ್ನು ಕಡ್ಡಾಯವಾಗಿ ರವಾನೆ ಮಾಡಬೇಕು

ಸಿಪಿವಿ ವಿಭಾಗವು ಅನುಮತಿ ನೀಡಿದರಷ್ಟೇ ಬಂಧಿತ ಮತ್ತು ವಶದಲ್ಲಿರುವ ವ್ಯಕ್ತಿಯ ಕಾನ್ಸುಲ್ ಭೇಟಿಗೆ ಅವಕಾಶ ನೀಡಬೇಕು. ಈ ಅನುಮತಿ ನೀಡುವ ಅಧಿಕಾರ ಸಿಪಿವಿ ವಿಭಾಗಕ್ಕೆ ಮಾತ್ರ ಇದೆ

ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಜೈಲು ಮತ್ತು ಬಂಧನ ಕೇಂದ್ರಗಳಲ್ಲಿ ಇರುವ ವಿದೇಶಿಯರ ಬಗ್ಗೆ ಗೃಹ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಪ್ರತಿ ಮೂರು ತಿಂಗಳಿಗೆ ಒಮ್ಮೆ ವರದಿ ನೀಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT