ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಂಸಿ–ಎಂಜಿಪಿ ಮೈತ್ರಿಕೂಟದ ಘೋಷಣೆ: ಮೂಲ ಗೋವನ್ನರಿಗೆ ಮನೆ, ಹಕ್ಕುಪತ್ರ

Last Updated 12 ಜನವರಿ 2022, 4:08 IST
ಅಕ್ಷರ ಗಾತ್ರ

ಪಣಜಿ:ಗೋವಾ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಗೆ ಟಿಎಂಸಿ ಮತ್ತು ಎಂಜಿಪಿ ಮೈತ್ರಿಕೂಟವು ಮತ್ತಷ್ಟು ಜನಪ್ರಿಯ ಕಾರ್ಯಕ್ರಮಗಳನ್ನು ಸೇರಿಸಿದೆ. ‘ಪಕ್ಕಾ ಮನೆಯಿಲ್ಲದ ಗೋವಾದ ಮೂಲ ನಿವಾಸಿ ಕುಟುಂಬಗಳಿಗೆ 50,000 ಮನೆಗಳನ್ನು ಸಹಾಯಧನದ ಮೂಲಕ ನೀಡಲಾಗುತ್ತದೆ. ಅಲ್ಲದೆ ಗೋವಾದ ಮೂಲ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತದೆ’ ಎಂದು ಮೈತ್ರಿಕೂಟವು ಘೋಷಿಸಿದೆ.

‘ನಮ್ಮ ಮೈತ್ರಿಕೂಟವು ಅಧಿಕಾರಕ್ಕೆ ಬಂದ 250 ದಿನಗಳ ಒಳಗೆ ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಇದರಿಂದ ರಾಜ್ಯದ 2.1 ಲಕ್ಷ ಕುಟುಂಬಗಳಿಗೆ ಪ್ರಯೋಜನ ಸಿಗಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ 60ರಷ್ಟು ಜನರಿಗೆ ಯೋಜನೆಯ ಲಾಭ ದೊರೆಯಲಿದೆ. ಆದರೆ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಯ ವೆಚ್ಚದ ಪ್ರಮಾಣ ಶೇ 0.6ರಷ್ಟು ಮಾತ್ರ’ ಎಂದು ಮೈತ್ರಿಕೂಟವು ವಿವರಿಸಿದೆ.

‘ಮೈತ್ರಿಕೂಟವು ಘೋಷಿಸಿರುವ ವಿವಿಧ ಜನಪ್ರಿಯ ಯೋಜನೆಗಳಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯೇನೂ ಆಗುವುದಿಲ್ಲ.ಕುಟುಂಬದ ಮಹಿಳಾ ಮುಖ್ಯಸ್ಥೆಗೆ ₹5,000 ನೀಡುವ ಗೃಹಲಕ್ಷ್ಮಿ ಕಾರ್ಡ್‌ ಕಾರ್ಯಕ್ರಮದ ವೆಚ್ಚವು, ರಾಜ್ಯ ಬಜೆಟ್‌ನ ಶೇ 8ರಷ್ಟು ಮಾತ್ರ. ಉದ್ದಿಮೆ ಆರಂಭಿಸಲು ಕಡಿಮೆ ಬಡ್ಡಿ ದರದಲ್ಲಿ ಯವಜನರಿಗೆ ಸಾಲ ನೀಡುವ ಕಾರ್ಯಕ್ರಮದ ವೆಚ್ಚವು, ಬಜೆಟ್‌ನ ಶೇ 4ರಷ್ಟಾಗುತ್ತದೆ. ನಮ್ಮ ಎಲ್ಲಾ ಯೋಜನೆಗಳ ವೆಚ್ಚವು ವಾರ್ಷಿಕ ಬಜೆಟ್‌ನ ಶೇ 13.2ರಷ್ಟಾಗುತ್ತದೆ. ಆದರೆ ರಾಜ್ಯದ ಅರ್ಧಕ್ಕೂ ಹೆಚ್ಚು ಜನರಿಗೆ ಇದರ ಲಾಭ ದೊರೆಯಲಿದೆ’ ಎಂದು ಮೈತ್ರಿಕೂಟವು ಘೋಷಿಸಿದೆ.

ಟಿಎಂಸಿ–ಎಂಜಿಪಿ ಮೈತ್ರಿಕೂಟವು ಘೋಷಿಸಿರುವ ವಿವಿಧ ಜನಪ್ರಿಯ ಕಾರ್ಯಕ್ರಮಗಳು ಕಾರ್ಯಸಾಧುವಲ್ಲ. ರಾಜ್ಯ ಬಜೆಟ್‌ಗೆಇದರಿಂದ ಭಾರಿ ಹೊರೆಯಾಗಲಿದೆ ಎಂದು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ಟೀಕಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT