ನವದೆಹಲಿ: ‘ಈ ವರ್ಷದ ಬೇಸಿಗೆಯು ವಾಡಿಕೆಗಿಂತಲೂ ಅಧಿಕ ಬಿಸಿಲಿನಿಂದ ಕೂಡಿರುವ ನಿರೀಕ್ಷೆ ಇದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅಧ್ಯಕ್ಷತೆಯಲ್ಲಿ ಮಂಗಳವಾರ ಉನ್ನತ ಮಟ್ಟದ ಸಭೆ ನಡೆದಿದೆ.
‘ಗಂಗಾ ಬಯಲು ಪ್ರದೇಶ ಹಾಗೂ ಪೂರ್ವ ಭಾರತದ ಹಲವೆಡೆ ಈ ತಿಂಗಳ ಕೊನೆಯ ವಾರದಲ್ಲಿ ವಾಡಿಕೆಗಿಂತಲೂ 2 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕ ತಾಪಮಾನ ವರದಿಯಾಗುವ ಸಾಧ್ಯತೆ ಇದೆ’ ಎಂದು ಐಎಂಡಿ, ಸಭೆಗೆ ಮಾಹಿತಿ ನೀಡಿದೆ.
‘ಈ ತಿಂಗಳ ಉಳಿದ ಅವಧಿಯಲ್ಲಿ ತೀವ್ರ ರೀತಿಯ ಬಿಸಿಗಾಳಿ ಬೀಸುವ ಸಂಭವ ಇಲ್ಲ’ ಎಂದೂ ಹೇಳಿದೆ.
‘ಸದ್ಯದ ಮಟ್ಟಿಗೆ ಹಿಂಗಾರು ಬೆಳೆಯ ಪರಿಸ್ಥಿತಿ ಸಾಮಾನ್ಯವಾಗಿದೆ. ಈ ಬಾರಿ 112.18 ಮೆಟ್ರಿಕ್ ಟನ್ ಗೋಧಿ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಇದು ಹಿಂದೆಂದಿಗಿಂತಲೂ ಅಧಿಕ’ ಎಂದು ಕೃಷಿ ಇಲಾಖೆಯ ಕಾರ್ಯದರ್ಶಿಯವರು ಸಭೆಗೆ ಮಾಹಿತಿ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.