ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚು: 27 ಹುಲಿಗಳು ಅಪಾಯದಲ್ಲಿ

Last Updated 30 ಮಾರ್ಚ್ 2022, 9:34 IST
ಅಕ್ಷರ ಗಾತ್ರ

ಜೈಪುರ್: ರಾಜಸ್ಥಾನದಸಾರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ ಕಾಳ್ಗಿಚ್ಚು ವ್ಯಾಪಿಸಿದೆ. ಕಳೆದ ಭಾನುವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದರಿಂದ ಕಾಳ್ಗಿಚ್ಚು ಬುಧವಾರದಷ್ಟೊತ್ತಿಗೆ ಬಹುತೇಕ ಕಾಡನ್ನುವ್ಯಾಪಿಸಿದೆ.

ಕಾಳ್ಗಿಚ್ಚಿನಿಂದ ಸುಮಾರು 20 ಕ್ಕೂ ಹೆಚ್ಚು ಹುಲಿ ಹಾಗೂ ಹುಲಿ ಮರಿಗಳು ಅಪಾಯಕ್ಕೆ ಸಿಲುಕಿವೆ. ಸುಮಾರು 10 ಚದರ ಕಿ.ಮೀ ಇರುವಈ ಸಾರಿಸ್ಕಾ ಹುಲಿ ಸಂರಕ್ಷಿತಾರಣ್ಯದಲ್ಲಿ 27 ಹುಲಿ ಹಾಗೂ ಸಾವಿರಾರು ವನ್ಯಜೀವಿಗಳು ವಾಸಿಸುತ್ತಿವೆ.

ಬೆಂಕಿ ನಂದಿಸಲು ವಾಯುಸೇನೆಯ ಎರಡು ಹೆಲಿಕಾಪ್ಟರ್ ಮೂಲಕ ಸ್ಥಳೀಯರು ಹಾಗೂ ಅಗ್ನಿಶಾಮಕ ಇಲಾಖೆ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

‘ಸೋಮವಾರ ಬೆಳಿಗ್ಗೆಯಿಂದಲೇ ಐಎಎಫ್ ಹೆಲಿಕಾಫ್ಟರ್‌ಗಳ ಮೂಲಕ ಬೆಂಕಿ ನಂದಿಸಲು ಕ್ರಮ ವಹಿಸಲಾಗುತ್ತಿದೆ. ಗುರುವಾರದಷ್ಟೊತ್ತಿಗೆ ಬೆಂಕಿ ತಹಬದಿಗೆ ಬರಬಹುದು’ ಎಂದು ಮುಖ್ಯ ಅರಣ್ಯ ಸಂರಕ್ಷಕ ಡಿ.ಎನ್. ಪಾಂಡೆ ಹೇಳಿದ್ದಾರೆ.

ಇನ್ನೊಂದೆಡೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ‘ಬೆಂಕಿ ನಂದಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವಿರತವಾಗಿ ಶ್ರಮಿಸುತ್ತಿವೆ’ ಎಂದು ಹೇಳಿದ್ದಾರೆ.

‘ಸಾರಿಸ್ಕಾ ಅರಣ್ಯ ಪ್ರದೇಶ ಗುಡ್ಡಗಾಡುಗಳಿಂದ ಕೂಡಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸವಾಲುಂಟಾಗಿದೆ’ ಎಂದು ಸಾರಿಸ್ಕಾ ಕ್ಷೇತ್ರ ನಿರ್ದೇಶಕ ಆರ್‌.ಎನ್. ಮೀನಾ ಹೇಳಿದ್ದಾರೆ. ‘ಈ ಪ್ರದೇಶ ಹೆಚ್ಚಾಗಿ ಹುಲ್ಲುಗಾವಲು ಹಾಗೂ ಬಿದಿರಿನಿಂದಕೂಡಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT