ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ ಯುದ್ಧ: ಭಾರತದ ವಿದ್ಯಾರ್ಥಿಗಳು ರಷ್ಯಾಗೆ

Last Updated 24 ಫೆಬ್ರುವರಿ 2023, 2:56 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ನಲ್ಲಿ ಕಳೆದ ವರ್ಷ ಪ್ರಾರಂಭವಾದ ಯುದ್ಧದ ಕಾರಣದಿಂದಾಗಿ ಉಕ್ರೇನ್‌ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಭಾರತದ ಸಾವಿರಾರು ವಿದ್ಯಾರ್ಥಿಗಳನ್ನು ವಾಪಸು ಭಾರತಕ್ಕೆ ಕರೆತರಲಾಗಿತ್ತು. ಇವರಲ್ಲಿ ಹಲವು ವಿದ್ಯಾರ್ಥಿಗಳಲ್ಲಿ ತಮ್ಮ ವ್ಯಾಸಂಗ ಮುಂದುವರೆಸಲು, ಮರಳಿ ಉಕ್ರೇನ್‌ಗೆ ತೆರಳಿದ್ದರೆ, ಇನ್ನೂ ಹಲವರು ರಷ್ಯಾ, ಸೆರ್ಬಿಯಾ, ಉಜ್ಬೇಕಿಸ್ತಾನ ಹಾಗೂ ಇನ್ನಿತರ ಐರೋಪ್ಯ ರಾಷ್ಟ್ರಗಳಿಗೆ ತೆರಳಿದ್ದಾರೆ.

‘ರಷ್ಯಾವು ನಮ್ಮನ್ನು ಗೌರಯುತವಾಗಿ ಸ್ವಾಗತಿಸಿದೆ. ನಮ್ಮಿಂದ ಹೆಚ್ಚುವರಿ ಶುಲ್ಕವನ್ನೂ ಪಡೆದುಕೊಂಡಿಲ್ಲ’ ಎಂದು ಕೊನೇ ವರ್ಷದ ಎಂಬಿಬಿಎಸ್‌ ಓದುತ್ತಿರುವ ಜಿಸ್ನಾ ಜಿಜಿ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದರು.

‘2,500 ವಿದ್ಯಾರ್ಥಿಗಳು ವಾಪಸು ಉಕ್ರೇನ್‌ಗೆ ತೆರಳಿದ್ದಾರೆ. ಸುಮಾರು 4 ಸಾವಿರ ವಿದ್ಯಾರ್ಥಿಗಳು ರಷ್ಯಾ, ಸೆರ್ಬಿಯಾ ಹಾಗೂ ಉಜ್ಬೇಕಿಸ್ತಾನಕ್ಕೆ ತೆರಳಿದ್ದಾರೆ’ ಎಂದು ಉಕ್ರೇನ್‌ ಎಂಬಿಬಿಎಸ್‌ ವಿದ್ಯಾರ್ಥಿಗಳ ಪೋಷಕರ ಸಂಘದ (ಪಿಎಯುಎಂಎಸ್‌) ಅಧ್ಯಕ್ಷ ಆರ್‌.ಬಿ. ಗುಪ್ತಾ ಅವರು ಮಾಹಿತಿ ನೀಡಿದರು.

‘ಬೇರೆ ಬೇರೆ ದೇಶಗಳಿಗೆ ಹೋದವರಲ್ಲಿ ಹಲವರು ಐದನೇ ಹಾಗೂ ಆರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿಗಳು. ಸುಮಾರು 3 ಸಾವಿರ ವಿದ್ಯಾರ್ಥಿಗಳು ಇನ್ನೂ ಭಾರತದಲ್ಲೇ ಆನ್‌ಲೈನ್‌ ತರಗತಿಗಳ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ. 500 ವಿದ್ಯಾರ್ಥಿಗಳು ಎಂಬಿಬಿಎಸ್‌ ತೊರೆದು ಬೇರೆ ಕೋರ್ಸ್‌ಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT