ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ಗಿಂತ ಭಾರತದಲ್ಲಿ ಹಸಿವು ಅಧಿಕ

2022ರ ಜಾಗತಿಕ ಹಸಿವಿನ ಸೂಚ್ಯಂಕ ಬಿಡುಗಡೆ
Last Updated 15 ಅಕ್ಟೋಬರ್ 2022, 18:52 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಷ್ಯಾ ಖಂಡ ದಲ್ಲಿ ಭಾರತವು ಅತ್ಯಂತ ಹಸಿವಿನ ದೇಶ ಎಂಬ ಅಂಶ ಬಹಿರಂಗವಾಗಿದ್ದು, ಅಫ್ಗಾನಿಸ್ತಾನ ಹೊರತುಪಡಿಸಿ ದರೆ ಭಾರತದಲ್ಲೇ ಹಸಿವಿನ ಪ್ರಮಾಣ ಹೆಚ್ಚಿದೆ ಎಂಬುದು 2022ರ ಜಾಗತಿಕ ಹಸಿವಿನ ಸೂಚ್ಯಂಕದಿಂದ ಬಹಿರಂಗ ವಾಗಿದೆ.

ಸೂಚ್ಯಂಕದಂತೆ, ಭಾರತದ ನೆರೆಯ ದೇಶಗಳಾದನೆರೆಯಶ್ರೀಲಂಕಾ (64), ನೇಪಾಳ (81), ಬಾಂಗ್ಲಾದೇಶ (84) ಮತ್ತು ಪಾಕಿಸ್ತಾನ (99) ದೇಶಗಳು ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ. ಜಗತ್ತಿನ121 ದೇಶಗಳ ಪೈಕಿ ಭಾರತ 107ನೇ ಸ್ಥಾನ ಪಡೆದಿದೆ. ಅಫ್ಗಾನಿಸ್ತಾನ 109ನೇ ಸ್ಥಾನ ಪಡೆದಿದೆ. ಭಾರತವು ಕಳೆದ ವರ್ಷ 101 ಹಾಗೂ 2020ರಲ್ಲಿ 94ನೇ ಸ್ಥಾನದಲ್ಲಿತ್ತು.

ಜಾಗತಿಕ ಹಸಿವಿನ ಸೂಚ್ಯಂಕವು (ಜಿಎಚ್‌ಐ) ಜಾಗತಿಕ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಸಿವನ್ನು ಸಮಗ್ರವಾಗಿ ಅಳೆಯುವ ಸಾಧನ ವಾಗಿದೆ.

ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣವು ಶೇ 19.3ರಷ್ಟಿದ್ದು, ವಿಶ್ವ ದಲ್ಲಿಯೇ ಅತ್ಯಧಿಕವಾಗಿದೆ. ಒಟ್ಟಾರೆ 29.1 ಅಂಕಗಳನ್ನು ಪಡೆದಿರುವ ಭಾರತ ದಲ್ಲಿ ಹಸಿವಿನ ಪ್ರಮಾಣ ‘ಅಪಾಯಕಾರಿ’ ಮಟ್ಟದಲ್ಲಿದೆ ಎಂದು ವರದಿ ಹೇಳಿದೆ.

ಅಪೌಷ್ಟಿಕತೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ತೂಕ ಕಡಿಮೆ ಇರುವುದು, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಎತ್ತರ ಕಡಿಮೆ ಇರುವುದು ಹಾಗೂ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮರಣ ಪ್ರಮಾಣವನ್ನು ಪರಿಗಣಿಸಿ ಜಿಎಚ್‌ಐ ಅಂಕಗಳನ್ನು ನೀಡಲಾಗುತ್ತದೆ.

‘ಅಪೌಷ್ಟಿಕತೆ, ಹಸಿವಿನಂತಹ ನೈಜ ಸಮಸ್ಯೆಗಳನ್ನು ಗೌರವಾನ್ವಿತ ಪ್ರಧಾನಿಯವರು ಯಾವಾಗ ಪರಿಹರಿಸುತ್ತಾರೆ. ಹಿಂದಿ ಹೇರುವುದು ಮತ್ತು ದ್ವೇಷವನ್ನು ಹರಡುವುದರಿಂದ ಹಸಿವು ನಿವಾರಣೆ ಆಗುವುದಿಲ್ಲ’ ಎಂದು ಕಾಂಗ್ರೆಸ್‌ ನಾಯಕ ಪಿ. ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT