ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮೂಲದ ವ್ಯಕ್ತಿಗಳಿಂದ ₹903 ಕೋಟಿ ವಂಚನೆ ಪತ್ತೆ ಮಾಡಿದ ಹೈದರಾಬಾದ್ ಪೊಲೀಸರು

Last Updated 12 ಅಕ್ಟೋಬರ್ 2022, 17:14 IST
ಅಕ್ಷರ ಗಾತ್ರ

ಹೈದರಾಬಾದ್: ಚೀನಾ ಮೂಲದ ವ್ಯಕ್ತಿಗಳ ₹903 ಕೋಟಿ ಮೌಲ್ಯದ ಹೂಡಿಕೆ ವಂಚನೆ ಪತ್ತೆ ಮಾಡಿರುವ ಹೈದರಾಬಾದ್ ಪೊಲೀಸರು, ಒಬ್ಬ ಚೀನಿ ಪ್ರಜೆ ಮತ್ತು ತೈವಾನ್ ಪ್ರಜೆ ಸೇರಿ 10 ಮಂದಿಯನ್ನು ಬಂಧಿಸಿದ್ದಾರೆ.

ಲೊಕ್ಸಾಮ್(LOXAM)ಎಂಬ ಫೈನಾನ್ಸ್‌ ಆ್ಯಪ್‌ನಲ್ಲಿ ಹೂಡಿಕೆ ಮಾಡುವಂತೆ ಗ್ರಾಹಕರನ್ನು ಸೆಳೆಯುತ್ತಿದ್ದರು. ಬಳಿಕ, ಹೂಡಿಕೆ ಮಾಡಿದ ಹಣ ದಿಢೀರನೆ ಕಟ್ ಆಗುತ್ತಿತ್ತು. ಬಳಿಕ, ಚೀನಿಯರ ಸೂಚನೆಯ ಮೇರೆಗೆ ಸಹ ಆರೋಪಿಗಳಾದ ಭಾರತೀಯರು ತೆರೆದಿದ್ದ ಬ್ಯಾಂಕ್ ಖಾತೆಗಳಿಗೆ ಜಮೆ ಆಗುತ್ತಿತ್ತು.

ಪ್ರಕರಣಗಳ ಆರೋಪಿಗಳಾದ ಆರೋಪಿಗಳಾದ ಸಾಹಿಲ್ ಬಾಲಾಜಿ, ಸನ್ನಿ ಅಲಿಯಾಸ್ ಪಂಕಜ್, ವೀರೇಂದರ್ ಸಿಂಗ್, ಸಂಜಯ್ ಯಾದವ್, ನವನೀತ್ ಕೌಶಿಕ್, ಮೊಹಮ್ಮದ್ ಪರ್ವೇಜ್, ಸೈಯದ್ ಸುಲ್ತಾನ್, ಮಿರ್ಜಾ ನದೀಮ್ ಬೇಗ್, ಚೀನೀ ಪ್ರಜೆ ಲೀ ಝೊಂಗ್ಜುನ್, ತೈವಾನ್ ಪ್ರಜೆ ಚು ಚುನ್ ಯು ಎಂಬುವರನ್ನು ದೇಶದ ವಿವಿಧೆಡೆಗಳಲ್ಲಿ ಬಂಧಿಸಲಾಗಿದೆ.

ಪ್ರಕರಣ ಕುರಿತಂತೆ ಬುಧವಾರ ಹೆಚ್ಚಿನ ಮಾಹಿತಿ ಬಿಡುಗಡೆ ನೀಡಿದ ಹೈದರಾಬಾದ್ ಪೊಲೀಸ್ ಕಮಿಷನರ್ ಸಿ.ವಿ. ಆನಂದ್, ದೆಹಲಿ ಮತ್ತು ಮುಂಬೈನಿಂದ ಹವಾಲಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಹೈದರಾಬಾದ್‌ನ ತರನಕಾ ಪ್ರದೇಶದ ನಿವಾಸಿಯೊಬ್ಬರು ದಾಖಲಿಸಿದ ದೂರಿನ ಆಧಾರದ ಮೇಲೆ ಸೈಬರ್ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ದೂರುದಾರ ಗ್ರಾಹಕ ಹೂಡಿಕೆ ಮಾಡಿದ್ದ ₹1.6 ಲಕ್ಷ ಹಣವನ್ನು ವಂಚಿಸಿ ಆರೋಪಿ ವೀರೇಂದರ್ ಸಿಂಗ್ ತೆರೆದಿದ್ದ ಷಿಂಡಾಯ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿದ್ದ ಇಂಡಸ್ ಇಂಡ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ..

ಪುಣೆಯಲ್ಲಿ ಬಂಧಿತನಾಗಿರುವ ಸಿಂಗ್, ಚೀನಾದ ವ್ಯಕ್ತಿ ಜ್ಯಾಕ್ ಸೂಚನೆ ಮೇರೆಗೆ ತಾನೇ ಖಾತೆ ತೆರೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ಇಂಟರ್ನೆಟ್ ಬ್ಯಾಂಕಿಂಗ್ ಸಂಬಂಧಿತ ಮಾಹಿತಿಗಳನ್ನು ನೀಡಿ, ಖಾತೆಯನ್ನು ಅವರ ಸುಪರ್ದಿಗೇ ಒಪ್ಪಿಸಿರುವುದಾಗಿ ತಿಳಿಸಿದ್ದಾನೆ.

ಬೆಟೆಂಚ್‌ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್ ಮತ್ತು ಷಿಂಡಾಯ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಖಾತೆಗಳಿಗೆ ಒಂದೇ ಫೋನ್ ನಂಬರ್ ಲಿಂಕ್ ಮಾಡಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಚೀನಾದ ಲೆಕ್ ಅಲಿಯಾಸ್ ಲೀ ಸೂಚನೆ ಮೇರೆಗೆ ದೆಹಲಿ ಮೂಲದ ಆರೋಪಿ ಸಂಜಯ್ ಕುಮಾರ್, ಬೆಟೆಂಚ್ ಹೆಸರಿನಲ್ಲಿ ಖಾತೆ ತೆರೆದಿದ್ದು, ಚೀನಾದ ಪೆಯ್ ಮತ್ತು ಹುವಾನ್ ಝೂಯನ್ ಎಂಬುವರಿಗೆ ಖಾತೆಯ ಮಾಹಿತಿ ಕಳುಹಿಸಿದ್ದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT