ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್ ಗ್ಯಾಂಗ್ ರೇಪ್: ಆರೋಪಿಗಳನ್ನು ವಯಸ್ಕರೆಂದು ಪರಿಗಣಿಸಲು ಪೊಲೀಸರ ಮನವಿ

Last Updated 9 ಜೂನ್ 2022, 12:50 IST
ಅಕ್ಷರ ಗಾತ್ರ

ಹೈದರಾಬಾದ್ : ಹೈದರಾಬಾದ್ ಜುಬಿಲಿ ಹಿಲ್ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳನ್ನು ವಯಸ್ಕರೆಂದು ಪ್ರಕರಣ ದಾಖಲಿಕೊಂಡು ತನಿಖೆ ಮಾಡಲು ತಮಗೆ ಅನುಮತಿ ನೀಡಬೇಕು ಎಂದು ಹೈದರಾಬಾದ್ ಪೊಲೀಸರು ಅಲ್ಲಿನ ಬಾಲ ನ್ಯಾಯ ಮಂಡಳಿಗೆ ಮನವಿ ಮಾಡಿದ್ದಾರೆ.

ಕಳೆದ ಮೇ 28 ರಂದು ಹೈದರಾಬಾದ್‌ನ ಜುಬಿಲಿ ಹಿಲ್‌ನಲ್ಲಿ ಐವರು ಬಾಲಕರು ಹಾಗೂ ಒಬ್ಬ ಯುವಕ ಪಬ್ ಒಂದರಿಂದ ಹೊರಗೆ ಬಂದು 17 ವರ್ಷದ ಬಾಲಕಿ ಮೇಲೆ ಕಾರ್‌ನಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ಘಟನೆ ಇಡೀ ದೇಶದ ಗಮನ ಸೆಳೆದಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಐವರು 18 ವರ್ಷ ಕೆಳಗಿನವರಾಗಿದ್ದರೆ, ಇನ್ನೊಬ್ಬ 18 ವರ್ಷ ಮೇಲ್ಪಟ್ಟಿದ್ದಾನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸುವ ದೃಷ್ಟಿಯಿಂದ ಐವರು ಆರೋಪಿ ಬಾಲಕರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸಲು ತಮಗೆ ಅನುಮತಿ ನೀಡಬೇಕು ಎಂದು ಹೈದರಾಬಾದ್ ಪೊಲೀಸರು ಬಾಲ ನ್ಯಾಯ ಮಂಡಳಿಗೆ ಗುರುವಾರ ಮನವಿ ಮಾಡಿದ್ದಾರೆ.

ಬಂಧಿತರಲ್ಲಿ ಒಬ್ಬ ಹುಡುಗ ಎಐಎಂಐಎಂ ಪಕ್ಷದ ಶಾಸಕರ ಮಗ, ಇನ್ನೊಬ್ಬ ಟಿಆರ್‌ಎಸ್ ಪಕ್ಷದ ಶಾಸಕರ ಮಗ ಹಾಗೂ ಉಳಿದ ನಾಲ್ವರು ರಾಜಕೀಯ ಮುಖಂಡರ ಮಕ್ಕಳು ಎನ್ನಲಾಗಿದೆ.

ಈ ಬಗ್ಗೆ ಮಾತನಾಡಿರುವ ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ ಆನಂದ್, ವಯಸ್ಕರೆಂದು ವಿಚಾರಣೆ ನಡೆಸಿ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ 20 ವರ್ಷಕ್ಕಿಂತ ಕಡಿಮೆ ಇಲ್ಲದೇ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಬಹುದು. ಈ ಬಗ್ಗೆ ಬಾಲ ನ್ಯಾಯ ಮಂಡಳಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದಿದ್ದಾರೆ.

ಹೈದರಾಬಾದ್ ಪೊಲೀಸರು ಆರೋಪಿಗಳನ್ನು ವಯಸ್ಕರೆಂದು ವಿಚಾರಣೆ ನಡೆಸಲು ಬಾಲಾಪರಾಧಿ ನ್ಯಾಯ ಕಾಯ್ದೆ 2015ರ ಅಡಿ ಈ ಮನವಿ ಮಾಡಿದ್ದಾರೆ.

ಇನ್ನು ಈ ಬಗ್ಗೆ ಟಿಆರ್‌ಎಸ್ ಪಕ್ಷದ ಅಧ್ಯಕ್ಷ ಕೆ.ಟಿ. ರಾಮರಾವ್ ಅವರು, ವಯಸ್ಕರು ಮಾಡುವಂತಹ ತಪ್ಪನ್ನು ಅಪ್ರಾಪ್ತರೂ ಮಾಡಿದರೆ ಅವರಿಗೂ ಕೂಡ ವಯಸ್ಕರಿಗೆ ನೀಡುವಂತ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT