ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LIVE| ಹೈದರಾಬಾದ್‌ ಪಾಲಿಕೆ ಫಲಿತಾಂಶ: ಬಿಜೆಪಿಗೆ 48 ವಾರ್ಡ್‌ಗಳು; ಉತ್ತಮ ಸಾಧನೆಗೆ ಬೆನ್ನು ತಟ್ಟಿಕೊಂಡ ನಾಯಕರು
LIVE

ಭಾರಿ ಜಿದ್ದಾಜಿದ್ದಿನಿಂದ ಕೂಡಿರುವ 'ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌' (ಜಿಎಚ್‌ಎಂಸಿ) ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ಬೆಳಗ್ಗೆ 8ಗಂಟೆಯಿಂದಲೇ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಒಟ್ಟು 150 ವಾರ್ಡ್‌ಗಳ ಜಿಎಚ್‌ಎಂಸಿ ಚುನಾವಣೆಗೆ ಡಿ.1ರಂದು ಮತದಾನ ನಡೆದಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಮತಪತ್ರಗಳನ್ನು ಬಳಸಿ ಚುನಾವಣೆ ನಡೆಸಲಾಗಿದೆ. ಒಟ್ಟು 1,122 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹೈದರಾಬಾದ್‌ ಅನ್ನು ಭಾಗ್ಯನಗರವಾಗಿ ಮರುನಾಮಕರಣ ಮಾಡುವ ವಿಚಾರಗಳು, ಹೈದರಾಬಾದ್‌ ಅನ್ನು ನಿಜಾಮ ಸಂಸ್ಕೃತಿಯಿಂದ ಹೊರತರವು ಬಿಜೆಪಿ ಹೇಳಿಕೆಗಳು ಈ ಬಾರಿಯ ಚುನಾವಣೆಯನ್ನು ಕದನಕುತೂಹಲಗೊಳಿಸಿವೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌), ಬಿಜೆಪಿ, ಕಾಂಗ್ರೆಸ್‌ ಚುನಾವಣಾ ಆಖಾಡದಲ್ಲಿವೆ. ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಯನ್ನು ಇಲ್ಲಿ ನೀಡಲಾಗುತ್ತಿದೆ.
Last Updated 4 ಡಿಸೆಂಬರ್ 2020, 16:26 IST
ಅಕ್ಷರ ಗಾತ್ರ
16:2604 Dec 2020

ಬಿಜೆಪಿ 2ನೇ ಅತಿ ದೊಡ್ಡ ಪಕ್ಷ

ತೆಲಂಗಾಣ ರಾಜ್ಯದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಅಪ್‌ಡೇಟ್‌ ಪ್ರಕಾರ, ಟಿಆರ್‌ಎಸ್ 55 ವಾರ್ಡ್‌ಗಳಲ್ಲಿ ಮತ್ತು ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ 44 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ 48 ವಾರ್ಡ್‌ಗಳಲ್ಲಿ ಹಾಗೂ ಕಾಂಗ್ರೆಸ್‌ 2 ವಾರ್ಡ್‌ನಲ್ಲಿ ಗೆಲುವು ಪಡೆದಿದೆ.

16:1804 Dec 2020
15:4504 Dec 2020

ತೆಲಂಗಾಣ ಜನರಿಗೆ ಧನ್ಯವಾದ ಅರ್ಪಿಸಿದ ಅಮಿತ್‌ ಶಾ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಭಿವೃದ್ಧಿ ರಾಜಕೀಯದ ಮೇಲೆ ಮತ್ತೊಮ್ಮೆ ಭರವಸೆ ತೋರಿರುವ ತೆಲಂಗಾಣದ ಜನರಿಗೆ ಧನ್ಯವಾದ ಅರ್ಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಕಠಿಣ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
 

15:3704 Dec 2020

ಹೈದರಾಬಾದ್‌ನಲ್ಲಿ ಬಿಜೆಪಿ ಸಂಭ್ರಮ

13:2104 Dec 2020

ಟಿಆರ್‌ಎಸ್‌–53

150 ವಾರ್ಡ್‌ಗಳ ಪೈಕಿ 131  ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದೆ. ಟಿಆರ್‌ಎಸ್‌–53,  ಎಐಎಂಐಎಂ–42, ಬಿಜೆಪಿ–35 ಹಾಗೂ ಕಾಂಗ್ರೆಸ್‌–2 ವಾರ್ಡ್‌ಗಳಲ್ಲಿ ಗೆಲುವು. 

13:0004 Dec 2020

ಬಿಜೆಪಿ 15 ವಾರ್ಡ್‌ಗಳಲ್ಲಿ ಗೆಲುವು

ತೆಲಂಗಾಣ ರಾಜ್ಯದ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಅಪ್‌ಡೇಟ್‌ ಪ್ರಕಾರ, ಟಿಆರ್‌ಎಸ್ 37 ವಾರ್ಡ್‌ಗಳಲ್ಲಿ ಮತ್ತು ಅಸಾದುದ್ದೀನ್‌ ಒವೈಸಿ ನೇತೃತ್ವದ ಎಐಎಂಐಎಂ 18 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ 15 ವಾರ್ಡ್‌ಗಳಲ್ಲಿ ಹಾಗೂ ಕಾಂಗ್ರೆಸ್‌ 2 ವಾರ್ಡ್‌ನಲ್ಲಿ ಗೆಲುವು ಪಡೆದಿದೆ.

12:3904 Dec 2020
10:3604 Dec 2020

ಆಗಲೇ 20 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದೇವೆ ಎಂದ ಎಐಎಂಐಎಂ

ಪಕ್ಷವಾರು ಮುನ್ನಡೆ–
* ಟಿಆರ್‌ಎಸ್‌: 58
* ಬಿಜೆಪಿ: 39
* ಎಐಎಂಐಎಂ: 33
* ಕಾಂಗ್ರೆಸ್‌: 2 
 

10:2804 Dec 2020

ದೇಶದಲ್ಲಿ ಹಲವು ಸಮಸ್ಯೆಗಳಿರುವಾಗ ಕೇಂದ್ರದ ನಾಯಕರು ಇಲ್ಲಿಗೇಕೆ ಬಂದರು?

'ದೇಶದಲ್ಲಿ ರೈತರ ಪ್ರತಿಭಟನೆ ಸೇರಿದಂತೆ ಹಲವು ಸಮಸ್ಯೆಗಳಿವೆ, ಆದರೆ ಕೇಂದ್ರ ಸರ್ಕಾರದ ಮುಖಂಡರು ಪಾಲಿಕೆ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದ್ದು ಏಕೆಂದು ತಿಳಿಯುತ್ತಿಲ್ಲ' ಎಂದು ತೆಲಂಗಾಣ ಸಚಿವ ತಲನಾನಿ ಶ್ರೀನಿವಾಸ್‌ ಯಾದವ್ ಹೇಳಿದ್ದಾರೆ. 
 

09:3604 Dec 2020

ಬಿಜೆಪಿ 30 ವಾರ್ಡ್‌ಗಳಲ್ಲಿ ಮುನ್ನಡೆ


ಬಿಜೆಪಿ ರಾಷ್ಟ್ರೀಯ ನಾಯಕರು ಅಕಾಡಕ್ಕಿಳಿದು ಪ್ರಚಾರ ಕೈಗೊಂಡಿದ್ದರಿಂದ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿರುವ ಹೈದರಾಬಾದ್‌ ಪಾಲಿಕೆ ಚುನಾವಣೆಯಲ್ಲಿ ಟಿಆರ್‌ಎಸ್‌ ಮುನ್ನಡೆ ಕಾಯ್ದುಕೊಂಡಿದೆ. 70 ವಾರ್ಡ್‌ಗಳಲ್ಲಿ ಟಿಆರ್‌ಎಸ್‌ ಮುಂದಿದ್ದರೆ, ಬಿಜೆಪಿ 30 ವಾರ್ಡ್‌ಗಳಲ್ಲಿ ಹಾಗೂ ಎಐಎಂಐಎಂ 45 ವಾರ್ಡ್‌ಗಳಲ್ಲಿ, ಕಾಂಗ್ರೆಸ್‌ 4 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿವೆ.