ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈದರಾಬಾದ್‌ ಸಾಮೂಹಿಕ ಅತ್ಯಾಚಾರ: ನಾಲ್ವರು ಬಾಲಾರೋಪಿಗಳಿಗೆ ಜಾಮೀನು

Last Updated 27 ಜುಲೈ 2022, 10:50 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ):ಇಲ್ಲಿನ 17ರ ಹರೆಯದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪದ ಪ್ರಕರಣ ಸಂಬಂಧ ನಾಲ್ವರು ಬಾಲಾರೋಪಿಗಳಿಗೆ ಬಾಲ ನ್ಯಾಯ ಮಂಡಳಿ (ಜೆಜೆಬಿ) ಜಾಮೀನು ಮಂಜೂರು ಮಾಡಿದೆ.

ಬಾಲ ನ್ಯಾಯಮಂಡಳಿಯು ಕೆಲವು ಷರತ್ತುಗಳನ್ನು ವಿಧಿಸಿ, ₹5,000 ಮೊತ್ತದ ತಲಾ ಎರಡು ಶ್ಯೂರಿಟಿಗಳನ್ನು ಪಡೆದು ಬಾಲಾರೋಪಿಗಳಿಗೆ (ಕಾನೂನು ಸಂಘರ್ಷದಲ್ಲಿರುವ ಮಕ್ಕಳು) ಮಂಗಳವಾರ ಜಾಮೀನು ನೀಡಿದೆ.ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು. ಪ್ರತಿ ತಿಂಗಳ ಮೊದಲ ಸೋಮವಾರ ಜಿಲ್ಲಾ ಪ್ರೊಬೆಷನ್‌ ಅಧಿಕಾರಿ ಎದುರು ಹಾಜರಾಗಿ ಸಹಿ ಹಾಕಬೇಕು ಎಂದು ಷರತ್ತು ವೀಧಿಸಲಾಗಿದೆ.

ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್‌ ಪ್ರದೇಶದಲ್ಲಿ ಮೇ 28ರಂದು ಹಗಲು ವೇಳೆ ಪಬ್‌ಗೆ ಭೇಟಿ ನೀಡಿದ್ದ ಬಾಲಕಿಗೆ ಡ್ರಾಪ್‌ ಕೊಡುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಈ ನಾಲ್ವರು ಬಾಲಕರ ಜತೆಗೆ 18 ವರ್ಷದ ಯುವಕನೂ ಸೇರಿದ್ದ. ವಯಸ್ಕ ಆರೋಪಿ ಸದ್ಯ ಜೈಲಿನಲ್ಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT