ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತಿ ಭಾಷೆಗಿಂತಲೂ ಹೆಚ್ಚಾಗಿ ಹಿಂದಿಯನ್ನು ಪ್ರೀತಿಸುತ್ತೇನೆ: ಅಮಿತ್‌ ಶಾ

Last Updated 13 ನವೆಂಬರ್ 2021, 7:05 IST
ಅಕ್ಷರ ಗಾತ್ರ

ವಾರಾಣಸಿ: ‘ಗುಜರಾತಿ ಭಾಷೆಗಿಂತಲೂ ಮಿಗಿಲಾಗಿ ನಾನು ಹಿಂದಿಯನ್ನು ಪ್ರೀತಿಸುತ್ತೇನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಶನಿವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆದ ‘ಭಾರತೀಯ ರಾಜಭಾಷಾ (ಅಧಿಕೃತ ಭಾಷೆ) ಸಮ್ಮೇಳನ’ದಲ್ಲಿ ಭಾಗವಹಿಸಿದ್ದ ಶಾ, ‘ ನಾನು ಗುಜರಾತಿ ಭಾಷೆಗೂ ಮಿಗಿಲಾಗಿ ಹಿಂದಿಯನ್ನು ಪ್ರೀತಿಸುತ್ತೇನೆ. ಅಧಿಕೃತ ಭಾಷೆಯಾಗಿರುವ ಹಿಂದಿಯನ್ನು ನಾನು ಬಲಪಡಿಸಬೇಕಿದೆ,‘ ಎಂದು ಅವರು ಹೇಳಿದ್ದಾರೆ. ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

‘ನಿಮ್ಮ ಮಕ್ಕಳೊಂದಿಗೆ ನಿಮ್ಮ ಮಾತೃಭಾಷೆಯಲ್ಲೇ ಮಾತನಾಡಿ. ಅದರಲ್ಲಿ ನಾಚಿಕೆಪಡುವಂಥದ್ದು ಏನೂ ಇಲ್ಲ. ನಮ್ಮ ಮಾತೃ ಭಾಷೆ ನಮ್ಮ ಹೆಮ್ಮೆ,‘ ಎಂದೂ ಅವರು ಹೇಳಿದ್ದಾರೆ.

2019ರ ಸೆ. 14ರಂದು ಹಿಂದಿ ದಿವಸ್‌ ವೇಳೆ ಟ್ವೀಟ್‌ ಮಾಡಿದ್ದ ಅಮಿತ್‌ ಶಾ ಅವರು, ’ಹಿಂದಿ, ಭಾರತವನ್ನು ಗುರುತಿಸುವ ಭಾಷೆಯಾಗಬೇಕು,’ ಎಂದು ಹೇಳಿದ್ದರು.

‘ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಹಿಂದಿ ಭಾಷೆಯು ಭಾರತವನ್ನು ಬೆಸೆಯುವ ಸಾಮರ್ಥ್ಯ ಹೊಂದಿದೆ. ಹಿಂದಿಯು ಭಾರತವನ್ನು ಜಾಗತಿಕವಾಗಿ ಗುರುತಿಸುವ ಭಾಷೆಯಾಗಬೇಕಾಗಿದೆ.’ ಎಂದು ಅವರು 2019ರಲ್ಲಿ ಹೇಳಿದ್ದರು.

ವಾರಾಣಸಿಯಲ್ಲಿ ನಡೆಯುತ್ತಿರುವ ‘ರಾಜಭಾಷಾ ಸಮ್ಮೇಳನ’ದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೂ ಭಾಗವಹಿಸಿದ್ದರು.

ಇವುಗಳನ್ನೂಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT