ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾದಲ್ಲಿ ಐಟಿ ದಾಳಿ: ದಾಖಲೆಯಿಲ್ಲದ ₹ 170 ಕೋಟಿ ಆದಾಯ ಪತ್ತೆ

Last Updated 8 ಡಿಸೆಂಬರ್ 2020, 12:08 IST
ಅಕ್ಷರ ಗಾತ್ರ

ನವದೆಹಲಿ: ಕಬ್ಬಿಣ ಉತ್ಪನ್ನಗಳ ವಹಿವಾಟು ಮತ್ತು ಉತ್ಪಾದನೆ ಮಾಡುವ ಒಡಿಶಾ ಮೂಲದ ಸಂಸ್ಥೆಯೊಂದರ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಮಂಗಳವಾರ ದಾಳಿ ಮಾಡಿದ್ದು, ದಾಖಲೆಯಿಲ್ಲದ ₹ 170 ಕೋಟಿ ಆದಾಯ ಹೊಂದಿರುವುದನ್ನು ಪತ್ತೆ ಹಚ್ಚಿದ್ದಾರೆ. ದಿನಗೂಲಿ ನೌಕರರನ್ನೇ ಸಂಸ್ಥೆಯು ತನ್ನ ನಿರ್ದೇಶಕರಾಗಿ ಬಿಂಬಿಸಿತ್ತು.

ರೂರ್ಕೆಲಾದಲ್ಲಿ ಇರುವ ಸಂಸ್ಥೆಯ ಕಚೇರಿಯ ಮೇಲೆ ಅಧಿಕಾರಿಗಳು ಡಿಸೆಂಬರ್ 3ರಂದು ದಾಳಿ ನಡೆಸಿದ್ದರು. ಎರಡು ಹಣಕಾಸು ವರ್ಷಗಳಲ್ಲಿ ಅಸ್ತಿತ್ವದಲ್ಲಿಯೇ ಇಲ್ಲದ 17 ನಕಲಿ ಸಂಸ್ಥೆಗಳಿಂದ ₹ 170 ಕೋಟಿ ಮೌಲ್ಯದ ನಕಲಿ ಖರೀದಿ ಕುರಿತ ದಾಖಲೆಗಳನ್ನು ಪತ್ತೆ ಹಚ್ಚಲಾಗಿದೆ. ಸಂಸ್ಥೆಯ ಮೂಲ ಹೆಸರು ಪತ್ತೆ ಹಚ್ಚಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT