ಶನಿವಾರ, ಮೇ 15, 2021
26 °C

ಬ್ರಿಟನ್‌ನಿಂದ ಬಂದ ಆಮ್ಲಜನಕ ಸಿಲಿಂಡರ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಬ್ರಿಟನ್‌ನಿಂದ 450 ಖಾಲಿ ಆಮ್ಲಜನಕ ಸಿಲಿಂಡರ್‌ ಸೇರಿದಂತೆ 35 ಟನ್‌ಗಳಷ್ಟು ವೈದ್ಯಕೀಯ ಸಾಧನಗಳನ್ನು ಹೊತ್ತು ತಂದ ವಿಮಾನವು ಮಂಗಳವಾರ ಚೆನ್ನೈನಲ್ಲಿ ಬಂದಿಳಿತು.

ಕೋವಿಡ್‌ ಎರಡನೇ ಅಲೆಯನ್ನು ಎದುರಿಸಲು ಭಾರತಕ್ಕೆ ನೆರವಾಗುವ ನಿಟ್ಟಿನಲ್ಲಿ ಬ್ರಿಟನ್‌ 5,000 ಆಮ್ಲಜನಕ ಸಿಲಿಂಡರ್‌ಗಳನ್ನು ಭಾರತಕ್ಕೆ ನೀಡಿದೆ. ಇದನ್ನು ಭಾರತೀಯ ವಾಯು ಪಡೆಯು(ಐಎಎಫ್‌) ವಿಮಾನಗಳು ಹಂತ ಹಂತವಾಗಿ ಬ್ರಿಟನ್‌ನಿಂದ ಭಾರತಕ್ಕೆ ತರಲಿವೆ.

ತಮಿಳುನಾಡಿನ ಆರೋಗ್ಯ ಇಲಾಖೆಯ ಸಲಹೆಯಂತೆ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ಇವುಗಳನ್ನು ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು