ಶನಿವಾರ, ಜನವರಿ 29, 2022
19 °C

Live | ಹೆಲಿಕಾಪ್ಟರ್‌ ಪತನ: ಸಕಲ ಮಿಲಿಟರಿ ಗೌರವಗಳೊಂದಿಗೆ ಬಿಪಿನ್ ರಾವತ್ ಅಂತ್ಯಕ್ರಿಯೆ

Published:
Updated:
ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಎಂಐ–17ವಿ5 ಹೆಲಿಕಾಪ್ಟರ್‌ ಬುಧವಾರ ತಮಿಳುನಾಡಿನ ಕೂನೂರಿನ ಸಮೀಪ ಪತನಗೊಂಡಿದೆ. ಈ ವೇಳೆ ಹೆಲಿಕಾಪ್ಟರ್‌ನಲ್ಲಿದ್ದ ರಾವತ್‌ ಸೇರಿ 13 ಮಂದಿ ಸಾವಿಗೀಡಾಗಿದರು. ಮೃತರ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನದ ಮೂಲಕ ನವದೆಹಲಿಗೆ ತರಲಾಗಿದೆ. ಒಂಬತ್ತು ಶರೀರಗಳ ಗುರುತು ಪತ್ತೆ ಮಾಡಲು ಡಿಎನ್‌ಎ ಪರೀಕ್ಷೆ ನಡೆಸಲಾಗಿದೆ. ಇಂದು ಬಿಪಿನ್‌ ರಾವತ್‌ ಮತ್ತು ಅವರ ಪತ್ನಿಯ ಅಂತ್ಯ ಸಂಸ್ಕಾರ ನೆರವೇರಿತು.
 • 05:08 pm

  ಸಕಲ ಮಿಲಿಟರಿ ಗೌರವಗಳೊಂದಿಗೆ ಬಿಪಿನ್ ರಾವತ್ ಅಂತ್ಯಕ್ರಿಯೆ

  ಪಂಚಭೂತಗಳಲ್ಲಿ ಲೀನರಾದ ಬಿಪಿನ್ ರಾವತ್. ಹೆಲಿಕಾಪ್ಟರ್ ಪತನದಲ್ಲಿ ನಿಧನರಾದ ಪತ್ನಿ ಮಧುಲಿಕಾರಿಗೂ ಅಂತಿಮ ವಿಧಿವಿಧಾನ.

 • 04:38 pm

  ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಪುತ್ರಿಯರಿಂದ ಅಂತಿಮ ನಮನ

  ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಅವರ ಪುತ್ರಿಯರಾದ ಕೃತಿಕಾ ಮತ್ತು ತಾರಿಣಿ ತಮ್ಮ ಪೋಷಕರಿಗೆ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಕುಟುಂಬದ ಹಲವಾರು ಸದಸ್ಯರು ಹಾಜರಿದ್ದರು. 

 • 04:33 pm

  ಅಂತಿಮ ನಮನ ಸಲ್ಲಿಸಿದ ಉತ್ತರಾಖಂಡದ ಮುಖ್ಯಮಂತ್ರಿ

 • 04:16 pm

  ಅಂತಿಮ ನಮನ ಸಲ್ಲಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

 • 04:13 pm

  ಅಂತಿಮ ನಮನ ಸಲ್ಲಿಸಿದ ಡಿಆರ್‌ಡಿಒ ಮುಖ್ಯಸ್ಥ

  ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಡಾ. ಜಿ ಸತೀಶ್ ರೆಡ್ಡಿ ಬಿಪಿನ್ ರಾವತ್ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

 • 04:10 pm

  ಗೌರವ ಸಲ್ಲಿಸಿದ ಫ್ರಾನ್ಸ್‌ನ ಭಾರತದ ರಾಯಭಾರಿ, ಬ್ರಿಟಿಷ್ ಹೈಕಮಿಷನರ್

  ಫ್ರಾನ್ಸ್‌ನ ಭಾರತದ ರಾಯಭಾರಿ ಎಮ್ಯಾನ್ಯುಯೆಲ್ ಲೆನಿಯನ್, ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಅವರಿಗೆ ಗೌರವ ಸಲ್ಲಿಸಿದರು.

 • 03:53 pm

  ನವದೆಹಲಿಯ ಬರಾಡ್‌ ಸ್ಕ್ವೇರ್‌ ತಲುಪಿದ ಪಾರ್ಥಿವ ಶರೀರ...

  ಸಿಡಿಎಸ್‌ ಬಿಪಿಎನ್‌ ರಾವತ್‌ ಮತ್ತು ಅವರ ಪತ್ನಿಯ ಪಾರ್ಥಿವ ಶರೀರ ನವದೆಹಲಿಯ ಬರಾಡ್‌ ಸ್ಕ್ವೇರ್‌ ಚಿತಾಗಾರ ತಲುಪಿದೆ.

 • 03:37 pm

  ನೆರೆ ರಾಷ್ಟ್ರಗಳ ಸೇನಾ ಕಮಾಂಡರ್‌ಗಳಿಂದ ಅಂತಿಮ ನಮನ...

  ಭಾರತದ ಮೊದಲ ಸಿಡಿಎಸ್‌, ಬಿಪಿನ್ ರಾವತ್‌ ಅವರ ಅಂತ್ಯ ಸಂಸ್ಕಾರ ಕ್ರಿಯೆಯಲ್ಲಿ ಶ್ರೀಲಂಕಾ, ಭೂತಾನ್‌, ನೇಪಾಳ ಹಾಗೂ ಬಾಂಗ್ಲಾದೇಶದ ಸೇನಾ ಕಮಾಂಡರ್‌ಗಳು ಭಾಗಿಯಾಗಲಿದ್ದಾರೆ.

 • 03:28 pm

  'ಜಬ್‌ ತಕ್‌ ಸೂರಜ್‌ ಚಾಂದ್‌ ರಹೇಗಾ, ಬಿಪಿನ್‌ ಜಿ ಕಾ ನಾಮ್‌ ರಹೇಗಾ'

  'ಸೂರ್ಯ ಚಂದ್ರರು ಇರುವವರೆಗೂ ಬಿಪಿನ್‌ ಜಿ ಅವರ ಹೆಸರು ಅಮರ' (ಜಬ್‌ ತಕ್‌ ಸೂರಜ್‌ ಚಾಂದ್‌ ರಹೇಗಾ, ಬಿಪಿನ್‌ ಜಿ ಕಾ ನಾಮ್‌ ರಹೇಗಾ) ಎಂದು ಜನರು ಘೋಷಣೆ ಕೂಗಿದರು. ಬಿಪಿನ್‌ ರಾವತ್‌ ಅವರ ಪಾರ್ಥಿವ ಶರೀರದ ಮೆರವಣಿಗೆಯು ನವದೆಹಲಿಯ ಬರಾಡ್‌ ಸ್ಕೋರ್‌ನ ಚಿತಾಗಾರದತ್ತ ಸಾಗುತ್ತಿದೆ.

 • 03:15 pm

  ಹೆಲಿಕಾಪ್ಟರ್‌ ದುರಂತದ ಬಗ್ಗೆ ಅವಮಾನಕರ ಪೋಸ್ಟ್‌ ಪ್ರಕಟಿಸಿದರೆ ಕಠಿಣ ಕ್ರಮ: ಬೊಮ್ಮಾಯಿ

  ಬಿಪಿನ್‌ ರಾವತ್‌ ಸಾವು, ಹೆಲಿಕಾಪ್ಟರ್‌ ದುರಂತದ ಬಗ್ಗೆ ಅವಮಾನಕರ ಪೋಸ್ಟ್‌ ಪ್ರಕಟಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಿಎಂ:

  'ಹೆಲಿಕಾಪ್ಟರ್‌ ದುರಂತದಲ್ಲಿ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಅವರನ್ನು ಕಳೆದುಕೊಂಡಿದ್ದೇವೆ, ದುರಂತದ ಕುರಿತು ಟ್ವಿಟರ್‌ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅವಮಾನಕರ ಪೋಸ್ಟ್‌ಗಳನ್ನು ಪ್ರಕಟಿಸುವುದನ್ನು ಸಹಿಸಲು ಸಾಧ್ಯವಿಲ್ಲ. ಅಂಥ ಸಂದೇಶಗಳನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಹಾಗೂ ತಪ್ಪಿತಸ್ತರ ವಿರುದ್ಧ ಕಠಿಣ ಶಿಸ್ತುಕ್ರಮ, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಅಂಥ ವ್ಯಕ್ತಿಗಳ ವಿರುದ್ಧ ತಕ್ಷಣವೇ ಪ್ರಕರಣ ದಾಖಲಿಸಲಾಗುತ್ತದೆ.' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟಿಸಿದ್ದಾರೆ.

   

 • 03:07 pm

  ರಾವತ್‌ ಅವರ ಅಂತಿಮ ದರ್ಶನ ಪಡೆದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್

 • 03:03 pm

  ಬಿಪಿನ್‌ ರಾವತ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರದ ಸಚಿವರು

  ಬಿಪಿನ್‌ ರಾವತ್‌ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಕೇಂದ್ರದ ಸಚಿವರು 

 • 02:59 pm

  ಬಿಕೆಯು ರೈತ ಸಂಘಟನೆಯ ಮುಖಂಡ ರಾಕೇಶ್‌ ಟಿಕಾಯಿತ್‌ ಅವರಿಂದ ರಾವತ್‌ ಪಾರ್ಥಿವ ಶರೀರಕ್ಕೆ ಅಂತಿಮ ನಮನ

  ಬಿಕೆಯು ರೈತ ಸಂಘಟನೆಯ ಮುಖಂಡ ರಾಕೇಶ್‌ ಟಿಕಾಯಿತ್‌ ಅವರಿಂದ ರಾವತ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ.

 • 02:57 pm

  ಹೆಲಿಕಾಪ್ಟರ್‌ ದುರಂತದ ಬಗೆಗಿನ ಊಹಾಪೋಹಗಳನ್ನು ನಿಲ್ಲಿಸಬೇಕು: ವಾಯುಪಡೆ

  ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್‌ ದುರಂತದ ಕುರಿತ ಊಹಾಪೋಹಗಳನ್ನು ನಿಲ್ಲಿಸಬೇಕು ಎಂದು ಭಾರತೀಯ ವಾಯುಪಡೆಯುವ ಶುಕ್ರವಾರ ಮನವಿ ಮಾಡಿದೆ.

  ‘ಡಿಸೆಂಬರ್ 8ರಂದು ಸಂಭವಿಸಿದ ಹೆಲಿಕಾಪ್ಟರ್ ದುರಂತದ ಕಾರಣದ ತನಿಖೆಗಾಗಿ ಭಾರತೀಯ ವಾಯುಪಡೆಯು ಮೂರೂ ಸೇನೆಗಳ ಸದಸ್ಯರು ಇರುವ ಸಮಿತಿ ರಚಿಸಿದೆ. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ಸತ್ಯವನ್ನೂ ಹೊರತರಲಾಗುತ್ತದೆ. ಅಲ್ಲಿಯವರೆಗೆ, ಮಡಿದವರ ಘನತೆಯನ್ನು ಕಾಪಾಡಲು, ಮಾಹಿತಿ ಇಲ್ಲದ ಊಹಾಪೋಹಗಳನ್ನು ತಡೆಯಬೇಕು,’ ಎಂದು ವಾಯುಪಡೆಯ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಶುಕ್ರವಾರ ಟ್ವೀಟ್‌ ಮಾಡಲಾಗಿದೆ.

 • 02:52 pm

  ನವದೆಹಲಿ: ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಪಾರ್ಥಿವ ಶರೀರದ ಮೆರವಣಿಗೆ

  ನವದೆಹಲಿ: ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಅಧಿಕೃತ ನಿವಾಸದಿಂದ ಅವರ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿದೆ.

 • 10:00 pm

  ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರಿಗೆ ಬೆಂಗಳೂರಿನಲ್ಲಿ ಚಿಕಿತ್ಸೆ

  ಹೆಲಿಕಾಪ್ಟರ್‌ ದುರಂತದಲ್ಲಿ ಬದುಕುಳಿದಿರುವ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರಿಗೆ ಬೆಂಗಳೂರಿನ ಏರ್‌ಫೋರ್ಸ್‌ ಕಮಾಂಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರು ಆಸ್ಪತ್ರೆಗೆ ಭೇಟಿ ನೀಡಿದರು.

 • 09:57 pm

  ಸೇನೆ, ವಾಯುಪಡೆ, ನೌಕಾಪಡೆಯ ಮುಖ್ಯಸ್ಥರಿಂದ ಗೌರವ

  ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಾಪಡೆಯ ಮುಖಸ್ಥರು ಪಾರ್ಥಿವ ಶರೀರಗಳಿಗೆ ಗೌರವ ಸಮರ್ಪಿಸಿದರು.

 • 09:50 pm

  ಗೌರವ ಸಲ್ಲಿಸಿದ ಪ್ರಧಾನಿ ಮೋದಿ

  ನವದೆಹಲಿಯ ಪಾಲಮ್‌ ವಾಯುನೆಲೆಗೆ ಪಾರ್ಥಿವ ಶರೀರಗಳು ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಗೃಹ ಸಚಿವ ಅಮಿತ್‌ ಶಾ, ಇತರೆ ಸಚಿವರು, ಅಧಿಕಾರಿಗಳು ಹಾಗೂ ಸೇನಾ ಪಡೆಗಳ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದರು.

 • 09:48 pm

  ನಾಳೆ ರಾವತ್‌ ಅಂತ್ಯ ಸಂಸ್ಕಾರ

  ಶುಕ್ರವಾರ ಮಧ್ಯಾಹ್ನ 12ರಿಂದ 2ರ ವರೆಗೂ ಕಾಮರಾಜ್‌ ಮಾರ್ಗ್‌ನಲ್ಲಿರುವ ರಾವತ್‌ ಅವರ ಅಧಿಕೃತ ನಿವಾಸದಲ್ಲಿ ರಾವತ್‌ ಮತ್ತು ಅವರ ಪತ್ನಿ ಮಧುಲಿಕಾ ಪಾರ್ಥಿವ ಶರೀರಗಳ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಲೋಧಿ ಚಿತಾಗಾರದಲ್ಲಿ ಶುಕ್ರವಾರ ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.

 • 09:46 pm

  ಹೆಲಿಕಾಪ್ಟರ್‌ ಪತನ: ದೆಹಲಿಗೆ ಪಾರ್ಥಿವ ಶರೀರಗಳು

  ಎಲ್ಲ ಪಾರ್ಥಿವ ಶರೀರಗಳನ್ನು ನವದೆಹಲಿಗೆ ತರಲಾಗಿದ್ದು, ಡಿಎನ್‌ಎ ಪರೀಕ್ಷೆ ನಡೆಸಿ ಗುರುತು ಪತ್ತೆಯಾದ ಬಳಿಕ ಸಂಬಂಧಿಕರಿಗೆ ಶರೀರಗಳನ್ನು ಹಸ್ತಾಂತರಿಸಲಾಗುತ್ತದೆ.

 • 10:24 pm
 • 09:35 pm

  ಶುಕ್ರವಾರ ರಾವತ್‌ ಅಂತ್ಯಕ್ರಿಯೆ


  ಶುಕ್ರವಾರ ರಾವತ್‌ ಅಂತ್ಯಕ್ರಿಯೆ

  ಸಿಡಿಎಸ್‌ ಬಿಪಿನ್‌ ರಾವತ್‌ ಮತ್ತು ಅವರ ಪತ್ನಿಯ ಅಂತ್ಯ ಕ್ರಿಯೆಯನ್ನು ಶುಕ್ರವಾರ (ಡಿ.10) ನಡೆಸಲು ನಿರ್ಧರಿಸಲಾಗಿದೆ. ದೆಹಲಿಯ ಕಂಟೋನ್ಮೆಂಟ್‌ನಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. ಮಿಲಿಟರಿ ವಿಮಾನದಲ್ಲಿ ಗುರುವಾರ ಸಂಜೆ ಪಾರ್ಥಿವ ಶರೀರಗಳನ್ನು ದೆಹಲಿಗೆ ತರಲಾಗುತ್ತದೆ. ಶುಕ್ರವಾರ ಪಾರ್ಥಿವ ಶರೀರಗಳನ್ನು ಶುಕ್ರವಾರ ರಾವತ್‌ ಅವರ ನಿವಾಸಕ್ಕೆ ತರಲಾಗುತ್ತದೆ ಹಾಗೂ ಆ ದಿನ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರವರೆಗೂ ಅಂತಿಮ ನಮನ ಸಲ್ಲಿಸಲು ಅವಕಾಶ ಕಲ್ಪಿಸಲಾಗುತ್ತದೆ.

  ಕಾಮರಾಜ್‌ ಮಾರ್ಗ್‌ನಿಂದ ದೆಹಲಿ ಕಂಟೋನ್ಮೆಂಟ್‌ನ ಬರಾಡ್‌ ಸ್ಕೋರ್‌ ವರೆಗೂ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ.

 • 07:27 pm

  ಅಪ್ರತಿಮ ಯೋಧ ಬಿಪಿನ್‌ ರಾವತ್‌: ಪ್ರಧಾನಿ ಮೋದಿ

 • 06:11 pm

  ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಸಾವು

  ಐಎಎಫ್‌ ಹೆಲಿಕಾಪ್ಟರ್‌ ಪತನದಲ್ಲಿ ಸಿಡಿಎಸ್‌ ಬಿಪಿನ್‌ ರಾವತ್‌ ಅವರು ಸಾವಿಗೀಡಾಗಿರುವುದಾಗಿ ಭಾರತೀಯ ವಾಯುಪಡೆ ಟ್ವೀಟಿಸಿದೆ. ರಾವತ್‌ ಸೇರಿ ಒಟ್ಟು 13 ಮಂದಿ ಸಾವಿಗೀಡಾಗಿದ್ದಾರೆ.

 • 04:52 pm

  ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌: 13 ಮಂದಿ ಸಾವು

  ಸಿಡಿಎಸ್‌ ಬಿಪಿನ್‌ ರಾವತ್‌ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿದ್ದು, ಪ್ರಯಾಣಿಸುತ್ತಿದ್ದ 14 ಜನರ ಪೈಕಿ 13 ಮಂದಿ ಸಾವಿಗೀಡಾಗಿರುವುದಾಗಿ ಎಎನ್‌ಐ ಟ್ವೀಟಿಸಿದೆ. ಡಿಎನ್‌ಎ ಪರೀಕ್ಷೆಯ ಮೂಲಕ ಮೃತ ದೇಹಗಳನ್ನು ಗುರುತಿಸಿರುವುದಾಗಿ ವರದಿಯಾಗಿದೆ.

 • 04:22 pm

  ಘಟನಾ ಸ್ಥಳಕ್ಕೆ ಭೇಟಿ ನೀಡಲಿರುವ ಸಿಎಂ ಎಂ.ಕೆ.ಸ್ಟಾಲಿನ್‌

  ಸಿಡಿಎಸ್‌ ಬಿಪಿನ್‌ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್‌ ಪತನವಾಗಿರುವ ಸ್ಥಳಕ್ಕೆ ತೆರಳುತ್ತಿರುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

 • 04:10 pm

  Video: ಹೆಲಿಕಾಪ್ಟರ್‌ ಪತನವಾಗಿರುವ ಸ್ಥಳ

 • 03:59 pm

  ಐಎಎಫ್‌ ಹೆಲಿಕಾಪ್ಟರ್‌ ಪತನ ತೀವ್ರ ನೋವಿನ ಘಟನೆ–ಬಸವರಾಜ ಬೊಮ್ಮಾಯಿ

  ಪ್ರಾಥಮಿಕ ಮಾಹಿತಿಯ ಪ್ರಕಾರ ರಾವತ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದೇನೆ. – ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

 • 03:51 pm

  ರಾವತ್‌ ಅವರ ನಿವಾಸದಲ್ಲಿ ರಾಜನಾಥ್‌ ಸಿಂಗ್‌

  ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸಿಡಿಎಸ್‌ ಬಿಪಿನ್‌ ರಾವತ್‌ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

 • 03:46 pm

  ಎಲ್ಲರ ಸುರಕ್ಷತೆಗಾಗಿ ಇಡೀ ದೇಶವು ಪ್ರಾರ್ಥಿಸುತ್ತಿದೆ...– ಮಮತಾ ಬ್ಯಾನರ್ಜಿ,

  ಸಿಡಿಎಸ್‌ ಬಿಪಿನ್‌ ರಾವತ್‌ ಸಹಿತ ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರ ಸುರಕ್ಷತೆಗಾಗಿ ಇಡೀ ದೇಶವು ಪ್ರಾರ್ಥಿಸುತ್ತಿದೆ...– ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ 

 • 03:30 pm

  ಸುಲೂರ್‌ ವಾಯು ನೆಲೆಯತ್ತ ವಾಯಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ

  ವಾಯಪಡೆಯ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಅವರು ಸುಲೂರ್‌ ವಾಯು ನೆಲೆಗೆ ತೆರಳುತ್ತಿರುವುದಾಗಿ ವರದಿಯಾಗಿದೆ.

 • 03:15 pm

  ಘಟನೆಯ ಸಂಬಂಧ ಪ್ರಧಾನಿಗೆ ಮಾಹಿತಿ ನೀಡಿದ ರಾಜನಾಥ್‌ ಸಿಂಗ್‌

  ರಾವತ್‌ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯಪಡೆಯ ಹೆಲಿಕಾಪ್ಟರ್‌ ಪತನದ ಸಂಬಂಧ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳ ಸಭೆ ನಡೆಯುತ್ತಿದೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಘಟನೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

 • 03:07 pm

  ಪತನಗೊಂಡಿರುವ Mi-17V5 ಹೆಲಿಕಾಪ್ಟರ್‌ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು..

  ಪತನಗೊಂಡಿರುವ Mi-17V5 ಹೆಲಿಕಾಪ್ಟರ್‌ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ಎಎನ್‌ಐ ಟ್ವೀಟಿಸಿದೆ.

 • 03:05 pm

  ಚಾಪರ್‌ನಲ್ಲಿದ್ದವರು ಸುರಕ್ಷಿತವಾಗಿರುವಂತೆ ಪ್ರಾರ್ಥನೆ: ರಾಹುಲ್ ಗಾಂಧಿ ಟ್ವೀಟ್‌

 • 03:01 pm

  ಕೊಯಮತ್ತೂರು ಜಿಲ್ಲೆಯ ವೆಲಿಂಗ್ಟನ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ರಾವತ್

  ಕೊಯಮತ್ತೂರು ಜಿಲ್ಲೆಯ ವೆಲಿಂಗ್ಟನ್‌ನಲ್ಲಿ ಉಪನ್ಯಾಸ ನೀಡಲು ಹೊರಟಿದ್ದ ರಾವತ್

 • 03:00 pm

  ವೆಲ್ಲಿಂಗ್‌ಟನ್‌ನಿಂದ ಏಳು ಕಿ.ಮೀ ದೂರದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನ

  ವೆಲ್ಲಿಂಗ್‌ಟನ್‌ನಿಂದ ಏಳು ಕಿ.ಮೀ ದೂರದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್‌ ಪತನ

 • 02:59 pm

  ಮೂವರು ಆಸ್ಪತ್ರೆಗೆ

  ಗಂಭೀರವಾಗಿ ಗಾಯಗೊಂಡು ಪತ್ತೆಯಾಗಿರುವ ಮೂವರನ್ನು ನೀಲಗಿರೀಸ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ.

 • 02:58 pm

  ನಾಲ್ವರು ಸಾವು; ಬಿಪಿನ್‌ ರಾವತ್‌ ಕುರಿತು ದೊರೆಯದ ಮಾಹಿತಿ...

  ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಪತನಗೊಂಡ ತಮಿಳುನಾಡಿನ ನೀಲಗಿರಿ ಅರಣ್ಯದ ವ್ಯಾಪ್ತಿಯ (ಕೂನೂರು ಬಳಿ) ಘಟನಾ ಸ್ಥಳದಲ್ಲಿ ನಾಲ್ಕು ಮೃತದೇಹಗಳು ಪತ್ತೆಯಾಗಿವೆ.

 • 02:54 pm

  ಐಎಎಫ್‌ Mi-17V5 ಹೆಲಿಕಾಪ್ಟರ್‌ ಪತನದ ಕುರಿತು ವಾಯುಪಡೆ ಟ್ವೀಟಿಸಿದೆ