ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ ವೈಮಾನಿಕ ತಾಲೀಮಿನಿಂದ ಹೊರಗುಳಿದ ಭಾರತೀಯ ವಾಯು ಸೇನೆ

Last Updated 26 ಫೆಬ್ರುವರಿ 2022, 16:14 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್‌ ಬಿಕ್ಕಟ್ಟಿನಿಂದ ಉಂಟಾಗಿರುವಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಮುಂದಿನ ತಿಂಗಳು ಬ್ರಿಟನ್‌ನಲ್ಲಿ ನಡೆಯಲಿರುವ ಹಲವು ರಾಷ್ಟ್ರಗಳ ವೈಮಾನಿಕ ಸಮರ ತಾಲೀಮಿನಲ್ಲಿ ಭಾಗವಹಿಸದಿರಲು ಭಾರತೀಯ ವಾಯುಪಡೆ (ಐಎಎಫ್‌) ಶನಿವಾರ ನಿರ್ಧರಿಸಿದೆ.

ವಾಡಿಂಗ್ಟನ್‌ನಲ್ಲಿಮಾರ್ಚ್ 6 ರಿಂದ 27ರವರೆಗೆ ನಡೆಯಲಿರುವ ‘ಕೋಬ್ರಾ ವಾರಿಯರ್‌’ ತಾಲೀಮಿನಲ್ಲಿ ಭಾಗವಹಿಸಲು 5 ತೇಜಸ್ ಲಘು ಯುದ್ಧ ವಿಮಾನಗಳನ್ನು ಕಳುಹಿಸಲಾಗುವುದು ಎಂದು ಐಎಎಫ್‌ ಮೂರು ದಿನಗಳ ಹಿಂದೆ ಹೇಳಿತ್ತು. ಆದರೆ, ಉಕ್ರೇನ್‌ ಬಿಕ್ಕಟ್ಟಿನಿಂದಾಗಿ ಇದರದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಐಎಎಫ್‌ ಟ್ವೀಟ್‌ ಮಾಡಿದೆ.ಆದರೆ, ನಂತರ ಆ ಟ್ವೀಟ್‌ ಅನ್ನು ಅಳಿಸಿದೆ.

ಟ್ವೀಟ್ ಅಳಿಸಿರುವುದಕ್ಕೆ ಕಾರಣ ನೀಡಿಲ್ಲವಾದರೂ, ಐಎಎಫ್ ‘ಕೋಬ್ರಾ ವಾರಿಯರ್’ ತಾಲೀಮಿನಲ್ಲಿ ಭಾಗವಹಿಸುತ್ತಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಕ್ರೇನ್ ವಿರುದ್ಧದ ರಷ್ಯಾದ ಮಿಲಿಟರಿ ಆಕ್ರಮಣದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತೆಗೆದುಕೊಂಡ ನಿರ್ಣಯದ ಮೇಲೆ ಭಾರತವು ಮತದಾನದಿಂದ ದೂರ ಉಳಿದ ಕೆಲವು ಗಂಟೆಗಳ ನಂತರ ಈ ನಿರ್ಧಾರವು ಹೊರಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT