ಸೋಮವಾರ, ಆಗಸ್ಟ್ 15, 2022
27 °C

ಅಗ್ನಿಪಥ ಯೋಜನೆಯಡಿ ನೇಮಕಾತಿ: ವಾಯುಪಡೆಗೆ 6 ದಿನಗಳಲ್ಲಿ 1.83 ಲಕ್ಷ ಅರ್ಜಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಗ್ನಿಪಥ ಯೋಜನೆಯ ಸೇನಾ ನೇಮಕಾತಿಗೆ ನೋಂದಣಿ ಆರಂಭವಾದ 6 ದಿನಗಳಲ್ಲಿ ಭಾರತೀಯ ವಾಯುಸೇನೆಗೆ 1.83 ಲಕ್ಷ ಅರ್ಜಿಗಳು ಬಂದಿವೆ.

ಜೂನ್ 24 ರಂದು ಆರಂಭವಾದ ನೋಂದಣಿ ಪ್ರಕ್ರಿಯೆಯಲ್ಲಿ ಸೋಮವಾರದ ವೇಳೆಗೆ 94,281 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಜೂನ್ 14 ರಂದು ಯೋಜನೆಯನ್ನು ಘೋಷಿಸಿದ ನಂತರ, ಒಂದು ವಾರ ಹಲವು ರಾಜ್ಯಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದವು. ಯೋಜನೆ ಹಿಂಪಡೆಯುವಂತೆ ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

‘ಇಲ್ಲಿಯವರೆಗೆ, 1,83,634 ಮಂದಿ ಭವಿಷ್ಯದ ಅಗ್ನಿವೀರರು ನೋಂದಣಿ ವೆಬ್‌ಸೈಟ್ <https://agnipathvayu.cdac.in> ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜುಲೈ 5, 2022 ರಂದು ನೋಂದಣಿ ಮುಕ್ತಾಯವಾಗುತ್ತದೆ’ಎಂದು ಐಎಎಫ್ ಟ್ವೀಟ್ ಮೂಲಕ ತಿಳಿಸಿದೆ.

ಯೋಜನೆಯಡಿಯಲ್ಲಿ, 17 ಮತ್ತು 23 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಅಗ್ನಿವೀರರಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ, ಅವರಲ್ಲಿ 25 ಪ್ರತಿಶತದಷ್ಟು ಯೋಧರನ್ನು ನಂತರ ಸೇನೆಗೆ ಸೇರಿಸಲಾಗುತ್ತದೆ.

ತೀವ್ರ ಪ್ರತಿಭಟನೆ ಬಳಿಕ ಕೇಂದ್ರ ಅರೆಸೇನಾ ಪಡೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಅಗ್ನಿವೀರರಿಗೆ ಆದ್ಯತೆ ನೀಡುವುದಾಗಿ ಕೇಂದ್ರ ಘೋಷಿಸಿದೆ.

ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಅಗ್ನಿಪಥ ಯೋಜನೆಯಡಿ ಸೇವೆ ಸಲ್ಲಿಸಿದವರಿಗೆ ರಾಜ್ಯ ಪೊಲೀಸ್ ಪಡೆಗಳ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಹೇಳಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು