ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಎಎಲ್‌ ನಿರ್ಮಿತ 15 ಲಘು ಯುದ್ಧ ಹೆಲಿಕಾಪ್ಟರ್‌ಗಳು ಇಂದು ಸೇನೆಗೆ ಸೇರ್ಪಡೆ

Last Updated 2 ಅಕ್ಟೋಬರ್ 2022, 11:35 IST
ಅಕ್ಷರ ಗಾತ್ರ

ನವದೆಹಲಿ: ಆಗಸದಿಂದಲೇ ಕ್ಷಿಪಣಿಗಳು ಮತ್ತು ಇನ್ನಿತರ ಅಸ್ತ್ರಗಳನ್ನು ಹಾರಿಸಿ ವೈಮಾನಿಕ ಗುರಿಗಳನ್ನು ಧ್ವಂಸಗೊಳಿಸುವ ಜತೆಗೆ ಬಹುವಿಧದ ಪಾತ್ರ ವಹಿಸುವ ಸಾಮರ್ಥ್ಯದಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು (ಎಲ್‌ಸಿಎಚ್‌) ಭಾರತೀಯ ವಾಯುಪಡೆಯು ಸೋಮವಾರ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಿದೆ.

ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌) ಈ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಸಂಪೂರ್ಣ ದೇಶಿಯ ತಂತ್ರಜ್ಞಾನದಲ್ಲಿ ನಿರ್ಮಿಸಿದ್ದು,ಇವುಗಳನ್ನು ಪ್ರಾಥಮಿಕವಾಗಿ ಅತಿ ಎತ್ತರದ ಪ್ರದೇಶಗಳಲ್ಲಿಕಾರ್ಯಾಚರಣೆಗೆ ನಿಯೋಜಿಸುವಂತೆ ವಿನ್ಯಾಸಗೊಳಿಸಲಾಗಿದೆ.

ಎರಡು ಎಂಜಿನ್‌ಗಳನ್ನು ಹೊಂದಿರುವ5.8 ಟನ್ ತೂಕದಹೆಲಿಕಾಪ್ಟರ್ ಈಗಾಗಲೇ ಕ್ಷಿಪಣಿಗಳು ಮತ್ತು ವಿವಿಧ ಶಸ್ತ್ರಾಸ್ತ್ರಗಳನ್ನು ಹಾರಿಸುವ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.ಈ ಹೆಲಿಕಾಪ್ಟರ್‌ 20 ಎಂಎಂ ಟರೆಂಟ್‌ ಗನ್ ಮತ್ತು 70 ಎಂಎಂ ಕ್ಷಿಪಣಿಗಳನ್ನು ಸಿಡಿಸಲಿದೆ. ಇವುಗಳ ಪರೀಕ್ಷೆ ಕಳೆದ ವರ್ಷ ನಡೆದಿತ್ತು. ಈ ಹೆಲಿಕಾಪ್ಟರ್‌ನ ಮತ್ತೊಂದು ವಿಶೇಷತೆ ಎಂದರೆ, ಸಿಯಾಚಿನ್‌ನಂತಹ ಅತಿ ಎತ್ತರ ನೀರ್ಗಲ್ಲು ಪ್ರದೇಶದಲ್ಲೂ, ಮರುಭೂಮಿಯಲ್ಲೂ ಸಮರ್ಥ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ ಎಂದು ಸೇನೆಯ ಅಧಿಕಾರಿಗಳು ಹೇಳಿದರು.

ಜೋಧಪುರದಲ್ಲಿರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಮತ್ತು ವಾಯುಪಡೆ ಮುಖ್ಯಸ್ಥ ವಿ.ಆರ್. ಚೌಧರಿ ಅವರ ಸಮ್ಮುಖದಲ್ಲಿ ಸೋಮವಾರ ನಡೆಯಲಿರುವ ಸಮಾರಂಭದಲ್ಲಿ ಭಾರತೀಯ ವಾಯುಪಡೆಗೆ 10 ಮತ್ತು ಸೇನೆಗೆ 5ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 95 ಇಂತಹ ಎಲ್‌ಸಿಎಚ್‌ಗಳನ್ನು ಸೇನೆಗೆ ಸೇರ್ಪಡೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

₹3,887 ಕೋಟಿ ವೆಚ್ಚದಲ್ಲಿ ಸೀಮಿತ ಸರಣಿ ಉತ್ಪಾದನೆಯ 15 ಎಲ್‌ಸಿಎಚ್‌ಗಳನ್ನು ಭಾರತೀಯ ಸೇನೆಗೆ ಸೇರಿಸಿಕೊಳ್ಳಲು ಮಾರ್ಚ್‌ನಲ್ಲಿ ಪ್ರಧಾನಿನರೇಂದ್ರ ಮೋದಿ ನೇತೃತ್ವದ ಭದ್ರತಾ ಕ್ಯಾಬಿನೆಟ್ ಸಮಿತಿ (ಸಿಸಿಎಸ್‌) ಅನುಮೋದನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT