ಭಾನುವಾರ, ನವೆಂಬರ್ 29, 2020
21 °C

ರಫೇಲ್‌ ಸ್ಕ್ವಾಡ್ರನ್‌ಗೆ ಶೀಘ್ರದಲ್ಲೇ ಮಹಿಳಾ ಪೈಲಟ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೂತನವಾಗಿ ಸೇರ್ಪಡೆಯಾಗಿರುವ ರಫೇಲ್‌ ಯುದ್ಧ ವಿಮಾನಗಳನ್ನು ಹಾರಾಟ ನಡೆಸಲಿರುವ ‘ಗೋಲ್ಡನ್‌ ಆ್ಯರೋಸ್‌’ ಸ್ಕ್ವಾಡ್ರನ್‌ಗೆ, ಶೀಘ್ರದಲ್ಲೇ ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‌ ಒಬ್ಬರು ಸೇರ್ಪಡೆಯಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

‘ಪ್ರಸ್ತುತ ಈ ಮಹಿಳಾ ಪೈಲಟ್‌, ರಫೇಲ್‌ ಹಾರಾಟ ತರಬೇತಿಯನ್ನು ಪಡೆಯುತ್ತಿದ್ದಾರೆ. ಮಿಗ್‌–21 ಯುದ್ಧ ವಿಮಾನಗಳನ್ನು ಹಾರಾಟ ನಡೆಸಿ ಅನುಭವವಿರುವ ಇವರನ್ನು, ಆಂತರಿಕ ಪ್ರಕ್ರಿಯೆ ಮುಖಾಂತರ ರಫೇಲ್‌ ಸ್ಕ್ವಾಡ್ರನ್‌ಗೆ ಆಯ್ಕೆ ಮಾಡಲಾಗಿದೆ’ ಎಂದು ಮೂಲಗಳು ತಿಳಿಸಿವೆ.  

ಭಾರತೀಯ ವಾಯುಪಡೆಯಲ್ಲಿ ಯುದ್ಧ ವಿಮಾನಗಳನ್ನು ಕಾರ್ಯಾಚರಣೆ ನಡೆಸಬಲ್ಲ 10 ಮಹಿಳಾ ಪೈಲಟ್‌ಗಳಿದ್ದು, 18 ಮಹಿಳಾ ನ್ಯಾವಿಗೇಟರ್‌ಗಳು ಇದ್ದಾರೆ. ವಾಯುಪಡೆಯಲ್ಲಿ ಒಟ್ಟಾರೆ 1,875 ಮಹಿಳಾ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. 

ಕಳೆದ ವರ್ಷ ಸೆ.10ರಂದು ಭಾರತೀಯ ವಾಯುಪಡೆಯು ಗೋಲ್ಡನ್‌ ಆ್ಯರೋಸ್‌ ಸ್ಕ್ವಾಡ್ರನ್‌ ಅನ್ನು ಪುನರುತ್ಥಾನಗೊಳಿಸಿತ್ತು. ₹59,000 ಕೋಟಿ ವೆಚ್ಚದಲ್ಲಿ ಭಾರತವು ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುತ್ತಿದ್ದು, ಈ ಪೈಕಿ 10 ಯುದ್ಧ ವಿಮಾನಗಳನ್ನು ಡಾಸೊ‌ ಏವಿಯೇಷನ್‌ ಕಂಪನಿ ಹಸ್ತಾಂತರಿಸಿದೆ. ಈ ಪೈಕಿ ಐದು ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಪೈಲೆಟ್‌ಗಳ ತರಬೇತಿಗಾಗಿ ಫ್ರಾನ್ಸ್‌ನಲ್ಲೇ ಇದ್ದು, ಉಳಿದ ಐದು ಯುದ್ಧ ವಿಮಾನಗಳು ಜುಲೈ 29ರಂದು ಭಾರತಕ್ಕೆ ಬಂದಿಳಿದಿದ್ದವು. 2021ರೊಳಗೆ 36 ಯುದ್ಧ ವಿಮಾನಗಳು ಭಾರತಕ್ಕೆ ಹಸ್ತಾಂತರವಾಗಲಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು