ಭಾನುವಾರ, ಅಕ್ಟೋಬರ್ 2, 2022
19 °C

 ಐಸಿಎಫ್‌ನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊ ರೈಲುಗಳ ಕೋಚ್‌ ತಯಾರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಚೆನ್ನೈ:  ಭಾರತೀಯ ರೈಲ್ವೆ ಬೋಗಿ ತಯಾರಿಕೆ  ಘಟಕ ಐಸಿಎಫ್‌ನಲ್ಲಿ  (ಇಂಟಿಗ್ರಲ್‌ ಕೋಚ್‌ ಫ್ಯಾಕ್ಟರಿ) ದೇಶದಲ್ಲೇ ಮೊದಲ ಬಾರಿಗೆ ಮೆಟ್ರೊ ರೈಲುಗಳ ಕೋಚ್‌ಗಳನ್ನು  (ಬೋಗಿ) ನಿರ್ಮಿಸಲಾಗುತ್ತಿದೆ.

ಇಲ್ಲಿ ನಿರ್ಮಿಸುವ ಮೆಟ್ರೊ ರೈಲು  ಬೋಗಿಗಳನ್ನು ಮಹಾರಾಷ್ಟ್ರ ಮೆಟ್ರೊ ರೈಲು ನಿಗಮಕ್ಕೆ ಪೂರೈಸಲಾಗುತ್ತದೆ.  ರಾಜ್ಯದ ರಾಜಧಾನಿ ಮುಂಬೈ ಮಹಾನಗರದಲ್ಲಷ್ಟೇ ಅಲ್ಲ, ರಾಜ್ಯದ ಹಲವು ನಗರಗಳಲ್ಲಿ ಸಾರಿಗೆ ವ್ಯವಸ್ಥೆಯ ಹೊಸ ಯುಗ ಇದರಿಂದ ಆರಂಭವಾಗಲಿದೆ.

 

ಸೋಮವಾರ ಸ್ವಾತಂತ್ರ್ಯೋತ್ಸವದಲ್ಲಿ ಮಾತನಾಡಿದ ಐಸಿಎಫ್‌ ಪ್ರಧಾನ ವ್ಯವಸ್ಥಾಪಕ ಎ.ಕೆ. ಅಗರ್‌ವಾಲ್‌ ಅವರು  ಈ ಘೋಷಣೆ ಮಾಡಿದರು.

 

ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ 75 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಐಸಿಎಫ್‌ ತಯಾರಿಸಿ, ದೇಶದಾದ್ಯಂತ ಸೇವೆಗೆ ಒದಗಿಸಲಾಗುವುದು  ಎಂದು ಅಗರ್ವಾಲ್ ಹೇಳಿದರು.

ವಂದೇ ಭಾರತ್ ಎಕ್ಸ್ ಪ್ರೆಸ್ 2.0ನ ಮೊದಲ ಪ್ರೊಟೊಟೈಪ್ ಮಾದರಿಯನ್ನು ಕೆಲವು ದಿನಗಳ ಹಿಂದೆಯೇ ಆರ್‌ಡಿಎಸ್‌ಒಗೆ ಹಸ್ತಾಂತರಿಸಲಾಗಿದ್ದು, ಕೆಲವೇ ತಿಂಗಳಲ್ಲಿ ಭಾರತೀಯ ರೈಲ್ವೆಗೆ ಸೇರ್ಪಡೆಗೊಳಿಸಲಾಗುತ್ತಿದೆ ಎಂದರು.

‘ವಂದೇ ಭಾರತ್ ರೇಕ್, ವಿಸ್ತಾಡೋಮ್ ಡೈನಿಂಗ್ ಕಾರ್ ರೈಲು ಸೇರಿ ಸುಮಾರು 50 ವಿಧಗಳಲ್ಲಿ  3,500 ಬೋಗಿಗಳನ್ನು ತಯಾರಿಸಲು ಇಸಿಎಫ್ ಯೋಜಿಸುತ್ತಿದೆ. ಇವು ಸೆಪ್ಟೆಂಬರ್‌ನಿಂದ ಗುಜರಾತ್‌ನಲ್ಲಿ ಸೇವೆಗೆ ಲಭ್ಯವಾಗಲಿವೆ ಎಂದು ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು