ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ 9ಕ್ಕೆ ವಿಚಾರಣೆ ಯಾಕೆ ಆರಂಭಿಸಬಾರದು: ನ್ಯಾಯಮೂರ್ತಿ ಲಲಿತ್ ಪ್ರಶ್ನೆ

Last Updated 15 ಜುಲೈ 2022, 15:50 IST
ಅಕ್ಷರ ಗಾತ್ರ

ನವದೆಹಲಿ: ಮಕ್ಕಳು ಪ್ರತಿದಿನ ಬೆಳಿಗ್ಗೆ ಏಳು ಗಂಟೆಗೆ ಶಾಲೆಗೆ ಹೋಗಬಹುದಾದರೆ, ನ್ಯಾಯಮೂರ್ತಿಗಳು ಮತ್ತು ವಕೀಲರಿಗೆ ಬೆಳಿಗ್ಗೆ 9 ಗಂಟೆಗೆ ನ್ಯಾಯಾಲಯಕ್ಕೆ ಯಾಕೆ ಬರಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಯು.ಯು.ಲಲಿತ್ ಅವರು ಶುಕ್ರವಾರ ಪ್ರಶ್ನಿಸಿದರು.

ಒಂದು ಗಂಟೆ ಮುಂಚಿತವಾಗಿ (ಬೆಳಿಗ್ಗೆ 9.30ಕ್ಕೆ) ಪ್ರಕರಣವೊಂದರ ವಿಚಾರಣೆ ಕೈಗೆತ್ತಿಕೊಂಡ ಅವರು, ‘ತಾತ್ವಿಕವಾಗಿ ಪ್ರಕರಣಗಳ ವಿಚಾರಣೆಗೆ ನಾವು ಬೆಳಿಗ್ಗೆ 9 ಗಂಟೆಗೆ ಕುಳಿತುಕೊಳ್ಳಬೇಕು. ಒಂದು ವೇಳೆ ನ್ಯಾಯಾಲಯಗಳು ಬೆಳಿಗ್ಗೆ 9.30ಕ್ಕೆ ಕಲಾಪ ಆರಂಭಿಸಿ 11.30ರವರೆಗೆ ವಿಚಾರಣೆ ನಡೆಸಿದರೆ, ಅರ್ಧ ಗಂಟೆ ವಿರಾಮದ ಬಳಿಕ 12 ಗಂಟೆಗೆ ಮತ್ತೆ ಆರಂಭಗೊಂಡು 2 ಗಂಟೆಯವರೆಗೂ ನಡೆಸಬಹುದು’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

9.30ಕ್ಕೆ ವಿಚಾರಣೆ ಆರಂಭಿಸಿದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್‌. ರವೀಂದ್ರ ಭಟ್‌ ಮತ್ತು ಸುಧಾನ್ಷು ಧುಲಿಯಾ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT