ಇಂದೋರ್: ಇಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ವಿದ್ಯಾರ್ಥಿಯೊಬ್ಬರಿಗೆ ವಾರ್ಷಿಕ ₹ 1.14 ಕೋಟಿ ವೇತನದ ನೌಕರಿ ಲಭಿಸಿದೆ ಎಂದು ಸಂಸ್ಥೆ ಹೇಳಿದೆ.
ಈ ಅವಧಿಯಲ್ಲಿ ಲಭಿಸಿದ ಅತೀ ದೊಡ್ಡ ವೇತನ ಪ್ಯಾಕೇಜ್ ಇದಾಗಿದೆ. ಕಳೆದ ಅವಧಿಯಲ್ಲಿ ವಿದ್ಯಾರ್ಥಿಯೊಬ್ಬರಿಗೆ ₹ 49 ಲಕ್ಷ ವಾರ್ಷಿಕ ವೇತನ ಇರುವ ಉದ್ಯೋಗ ಲಭಿಸಿತ್ತು. ಇದಕ್ಕೆ ಹೋಲಿಕೆ ಮಾಡಿದರೆ ಈಗ ಲಭಿಸಿರುವ ಪ್ಯಾಕೇಜ್ ₹ 65 ಲಕ್ಷದಷ್ಟು ಹೆಚ್ಚು.
ಕೊನೆಯ ಹಂತಲ್ಲಿ ಸುಮಾರು 658 ವಿದ್ಯಾರ್ಥಿಗಳು ದೇಶಿಯ ಹಾಗೂ ವಿದೇಶಿ ಕಂಪನಿಗೆ ಆಯ್ಕೆಯಾಗಿದ್ದು, ಸರಾಸರಿ ₹ 30.21 ಲಕ್ಷ ವಾರ್ಷಿಕ ವೇತನ ಪ್ಯಾಕೇಜ್ ಪಡೆದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.