ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ರಾಸ್‌ ಐಐಟಿ: ಎಂ.ಎ ಕೋರ್ಸ್‌

Last Updated 21 ಜೂನ್ 2022, 19:35 IST
ಅಕ್ಷರ ಗಾತ್ರ

ಚೆನ್ನೈ: ಪ್ರತಿಷ್ಠಿತ ಮದ್ರಾಸ್‌ ಭಾರತೀಯ ತಾಂತ್ರಿಕ ಸಂಸ್ಥೆಯು (ಐಐಟಿ–ಎಂ) 2023ನೇ ಶೈಕ್ಷಣಿಕ ಸಾಲಿನಿಂದ ವಿವಿಧ ವಿಷಯಗಳಲ್ಲಿ ಎರಡು ವರ್ಷಗಳ ಎಂ.ಎ ಕೋರ್ಸ್‌ ಆರಂಭಿಸಲಿದೆ.

ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದಡಿಯಲ್ಲಿ ಎಂ.ಎ ಕೋರ್ಸ್‌ಗಳು ಆರಂಭವಾಗಲಿದ್ದು, 2023ರ ಮಾರ್ಚ್‌/ ಏಪ್ರಿಲ್‌ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. 2023ರ ಜುಲೈನಲ್ಲಿ ತರಗತಿಗಳು ಆರಂಭವಾಗಲಿವೆ. ಪ್ರವೇಶ ಪರೀಕ್ಷೆಯ ದಿನಾಂಕ ಶೀಘ್ರದಲ್ಲಿಯೇ ಪ್ರಕಟವಾಗಲಿದೆ.

ಮಾನವಿಕ ವಿಷಯಗಳು, ವಿಜ್ಞಾನ, ವಾಣಿಜ್ಯ ಮತ್ತು ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಎಂ.ಎ ಕೋರ್ಸ್‌ ಪ್ರವೇಶ ಪಡೆಯಬಹುದು.

ಸಮಕಾಲೀನ ವಿಷಯಗಳಾದ ಅರ್ಥಶಾಸ್ತ್ರ, ನಗರ ಯೋಜನೆ ಮತ್ತು ಅಭಿವೃದ್ಧಿ, ಆರೋಗ್ಯ ನೀತಿ, ಪರಿಸರ, ಹವಾಮಾನ ಅರ್ಥಶಾಸ್ತ್ರ, ತಂತ್ರಜ್ಞಾನ ಮತ್ತು ನೀತಿ, ಹಾಗೂ ‘ಕಂಪ್ಯುಟೇಷನಲ್‌ ಲಿಂಗ್ವಿಸ್ಟಿಕ್ಸ್‌’ ವಿಷಯಗಳು ಹೊಸ ಎಂ.ಎ ಕೋರ್ಸ್‌ಗಳ ಪಠ್ಯಗಳಲ್ಲಿ ಇರುತ್ತವೆ ಎಂದು ಐಐಟಿ–ಎಂ ತಿಳಿಸಿದೆ.

ನಕ್ಸಲ್‌ ದಾಳಿ:

ಮೂವರ ಹತ್ಯೆ

ನವದೆಹಲಿ (ಪಿಟಿಐ): ನಕ್ಸಲರು ನಡೆ ಸಿದ ದಾಳಿಯಲ್ಲಿ ಒಡಿಶಾದ ನೌಪಾಡಾ ಜಿಲ್ಲೆಯಲ್ಲಿಮಂಗಳವಾರ ಮೂವರು ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಭೇದೆನ್ ವಲಯದ ಪಟಧಾರ ಮೀಸಲು ಅರಣ್ಯದಲ್ಲಿ ಏಳು ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಒಂದು ಶಿಬಿರದಿಂದ ಮತ್ತೊಂದು ಶಿಬಿರಕ್ಕೆ ಹೋಗುತ್ತಿದ್ದಾಗ ಈ ದಾಳಿ ನಡೆದಿದೆ.ದುರದೃಷ್ಟವಶಾತ್‌ ಮೂವರು ಹುತಾತ್ಮರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT