ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ವಲಸಿಗರಿಂದ ದೇಶದ ಭದ್ರತೆಗೆ ಅಪಾಯ: ನಿತ್ಯಾನಂದ ರೈ

ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವಾಲಯ
Last Updated 20 ಜುಲೈ 2021, 8:56 IST
ಅಕ್ಷರ ಗಾತ್ರ

ನವದೆಹಲಿ: ‘ರೋಹಿಂಗ್ಯ ಸಮುದಾಯದವರು ಸೇರಿದಂತೆ ಅಕ್ರಮವಾಗಿ ವಲಸೆ ಬಂದವರಿಂದ ದೇಶದಲ್ಲಿ ರಾಷ್ಟೀಯ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ‘ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಗಳವಾರ ಲೋಕಸಭೆಗೆ ತಿಳಿಸಿದರು.

ಸಂಸತ್ತಿನ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಬಹುಜನ ಸಮಾಜವಾದಿ ಪಕ್ಷದ(ಬಿಎಸ್‌ಪಿ) ಸಂಸದ ರಿತೇಶ್ ಪಾಂಡೆ ಅವರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, ‘ಇತ್ತೀಚೆಗೆ ಕೆಲವು ರೋಹಿಂಗ್ಯಾ ಸಮುದಾಯದವರು ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬ ವರದಿಗಳಿವೆ‘ ಎಂದು ತಿಳಿಸಿದರು‌.

ರೋಹಿಂಗ್ಯಾ ಸಮುದಾಯದವರನ್ನು ಭಾರತದಿಂದ ಗಡಿಪಾರು ಮಾಡದಂತೆ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಲಾಗಿದೆ. ‘ಈ ವಿಷಯ ನ್ಯಾಯಾಲಯದಲ್ಲಿದೆ. ಆದರೆ, ಅವರನ್ನು ಗಡಿಪಾರು ಮಾಡುವುದಕ್ಕೆ ಯಾವುದೇ ನ್ಯಾಯಾಲಯಗಳು ತಡೆ ನೀಡಿಲ್ಲ‘ ಎಂದು ಸಚಿವರು ಹೇಳಿದರು.

‘ಭಾರತಕ್ಕೆ ಬರುವ ವಿದೇಶಿಗರ ಬಳಿ ಸೂಕ್ತ ಪ್ರಯಾಣದ ದಾಖಲೆಗಳಿಲ್ಲದಿದ್ದರೆ ಅಥವಾ ನೀಡಿರುವ ದಾಖಲೆಗಳ ಅವಧಿ ಮುಗಿದಿದ್ದರೆ ಅಂಥ ವಿದೇಶಿ ಪ್ರಜೆಯನ್ನು ಅಕ್ರಮ ವಲಸಿಗ ಎಂದು ಪರಿಗಣಿಸಲಾಗುತ್ತದೆ. ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ‘ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT