ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನಿಗಳ ಕೈವಶದ ನಂತರ ಕಾಬೂಲ್‌ನಲ್ಲಿ ಮಹಿಳೆಯರ ಚಿತ್ರಗಳ ಧ್ವಂಸ

Last Updated 19 ಆಗಸ್ಟ್ 2021, 8:37 IST
ಅಕ್ಷರ ಗಾತ್ರ

ಕಾಬೂಲ್‌: ತಾಲಿಬಾನಿಗಳು ಕಾಬೂಲ್‌ ನಗರದ ಅಂಗಡಿ–ಮಂಗಟ್ಟುಗಳ ಮೇಲೆ ಜಾಹೀರಾತಿಗಾಗಿ ಹಾಕಲಾಗಿದ್ದ ಮಹಿಳೆಯರ ಚಿತ್ರಗಳಿಗೆ ಕಪ್ಪು ಬಣ್ಣಗಳನ್ನು ಬಳಿಯುವ ಮೂಲಕ ಅವುಗಳನ್ನು ಮುಚ್ಚುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಮಹಿಳೆಯರ ಚಿತ್ರಗಳನ್ನು ಧ್ವಂಸಗೊಳಿಸುತ್ತಿದ್ದಾರೆ.

ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ, ರಾಜಧಾನಿ ಕಾಬೂಲ್‌ನ ಚಹರೆ ವೇಗವಾಗಿ ಬದಲಾಗುತ್ತಿರುವುದರ ಸಂಕೇತವಾಗಿದೆ. ಆದರೆ, ತಾಲಿಬಾನಿಗಳು ಮಾತ್ರ, ನಾವು ಶರಿಯಾ ಕಾನೂನಿನ ವ್ಯಾಪ್ತಿಯಲ್ಲಿ ಮಹಿಳೆಯರನ್ನು ಗೌರವಿಸುತ್ತೇವೆ ಎಂದು ಹೇಳುತ್ತಿದ್ದಾರೆ.

2001ರಲ್ಲಿ ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಕೊನೆಗೊಂಡು, ಅಮೆರಿಕ ನೇತೃತ್ವದ ರಕ್ಷಣಾ ಪಡೆಗಳು, ಈ ದೇಶದ ರಕ್ಷಣೆಗೆ ನಿಂತ ಮೇಲೆ ಕಾಬೂಲ್‌ನಾದ್ಯಂತ ನೂರಾರು ಬ್ಯೂಟಿ ಪಾರ್ಲರ್‌ಗಳು ಆರಂಭವಾಗಿದ್ದವು. ಮಹಿಳೆಯರ ಮೇಕಪ್‌ ಮತ್ತು ಮಿನಿಕ್ಯೂರ್‌ಗೆ ಸಂಬಂಧಿಸಿದ ಪರಿಕರಗಳ ವ್ಯಾಪಾರ ವಹಿವಾಟು ನಡೆಯುತ್ತಿತ್ತು.

ಕಳೆದ ಭಾನುವಾರ ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ, ಕಾಬೂಲ್‌ ನಗರದ ಅಂಗಡಿಗಳಲ್ಲಿರುವ ಮಹಿಳೆಯರ ಚಿತ್ರಗಳಿಗೆ ಕಪ್ಪು ಬಣ್ಣ ಬಳಿದು, ಜನರಿಗೆ ಕಾಣದಂತೆ ಮಾಡುತ್ತಿದ್ದಾರೆ.

ಬ್ಯೂಟಿಪಾರ್ಲರ್‌, ಸಲೂನ್‌ಗಳ ಹಾಗೂ ಮತ್ತಿತರ ಅಂಗಡಿಗಳ ಹೊರಾಂಗಣದ ಗೋಡೆಯ ಮೇಲಿರುವ ರೂಪದರ್ಶಿಯರ ಚಿತ್ರವನ್ನು ವಿರೂಪಗೊಳಿಸಲಾಗುತ್ತಿದೆ. ಕಾಬೂಲ್‌ ನಗರದ ಪ್ರಮುಖ ರಸ್ತೆಯಲ್ಲಿ ಚಿನ್ನಾಭರಣ ಮಳಿಗೆಯೊಂದರ ಗೋಡೆಯ ಮೇಲಿದ್ದ ವಧುವನಂತೆ ಅಲಂಕೃತಗೊಂಡು, ನಗುತ್ತಿರುವ ಮಹಿಳೆಯೊಬ್ಬರ ಚಿತ್ರಗಳನ್ನು ತಾಲಿಬಾನಿ ಉಗ್ರನೊಬ್ಬ ಕಪ್ಪು ಬಣ್ಣವನ್ನು ಬಳಿದಿದ್ದಾನೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT