ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಕರೆನ್ ಜನಾಂಗದವರ ಮೇಲೆ ಸೇನೆಯ ದಬ್ಬಾಳಿಕೆ

ಮಿಲಿಟರಿ ಆಡಳಿತ ಜಾರಿಯಾಗುವ ಮುನ್ನವೇ ಒಳನಾಡಿನಲ್ಲಿ ಸೇನೆಯಿಂದ ದೌರ್ಜನ್ಯ
Last Updated 22 ಮಾರ್ಚ್ 2021, 6:34 IST
ಅಕ್ಷರ ಗಾತ್ರ

ಬ್ಯಾಂಕಾಕ್:ಮ್ಯಾನ್ಮಾರ್‌ನ ಆಗ್ನೇಯ ಭಾಗದಲ್ಲಿರುವ ಕರೆನ್‌ ಜನಾಂಗದವರ ಮೇಲೆ ಅಲ್ಲಿನ ಸೇನಾಪಡೆಯು ದಬ್ಬಾಳಿಕೆ ನಡೆಸುತ್ತಿದ್ದು ಇದರಿಂದ ಬೆಸತ್ತ ಆಸಮುದಾಯದರು ಮನೆಗಳನ್ನು ತೊರೆಯುತ್ತಿರುವುದು ಮುಂದುವರಿದಿದೆ.

ಮ್ಯಾನ್ಮಾರ್‌ನಲ್ಲಿ ಕಳೆದ ತಿಂಗಳು ಮಿಲಿಟರಿ ಆಡಳಿತ ಜಾರಿಯಾಗುವುದಕ್ಕೆ ಮೊದಲಿನಿಂದಲೂ ಕರೆನ್‌ ಜನಾಂಗದವರನ್ನುಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಆದರೆ, ಈ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಆಗ್ನೇಯ ಭಾಗದಲ್ಲಿರುವ ಕರೆನ್ ಸಮುದಾಯದ ಎಂಟು ಸಾವಿರ ಮಂದಿ ತಮ್ಮ ಮನೆಗಳನ್ನು ತೊರೆದಿದ್ದಾರೆ. ಅವರೆಲ್ಲ ಈಗಲೂ ಅರಣ್ಯದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಆರೋಗ್ಯ ಮತ್ತು ಸುರಕ್ಷತೆ ವಿಚಾರದಲ್ಲಿ ಅಭದ್ರತೆ ಕಾಡುತ್ತಿದೆ. ಹೀಗಾಗಿ ಅವರು ಪುನಃ ತಮ್ಮ ಮನೆಗಳಿಗೆ ಹಿಂದಿರುಗುವ ನಿರೀಕ್ಷೆ ಇಲ್ಲ ಎಂದು ‌ಆ ಜನಾಂಗಕ್ಕೆ ನೆರವಾಗುತ್ತಿರುವ ಸೇವಾ ಗುಂಪುಗಳು ಹೇಳಿವೆ.

ಮಿಲಿಟರಿ ದಂಗೆಯ ವಿರುದ್ಧ ನಡೆಯುತ್ತಿರುವ ಸಾಮೂಹಿಕ ಹೋರಾಟದ ಅಬ್ಬರವೇ ಎಲ್ಲ ಕಡೆ ಕಾಣುತ್ತಿದ್ದು,ದೇಶದ ಗಡಿಭಾಗಗಳಲ್ಲಿ ಇರುವ ಕರೆನ್‌ ಸಮುದಾಯದವರ ಈ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕರೆನ್‌ ಜನಾಂಗದ ಪ್ರಮುಖ ರಾಜಕೀಯ ಸಂಸ್ಥೆ ಕರೆನ್ ನ್ಯಾಷನಲ್ ಯೂನಿಯನ್, ಈಗ ಸ್ಥಳಾಂತರಗೊಂಡಿರುವ ಜನರಿಗೆ ಆಹಾರ, ಆಶ್ರಯ ಮತ್ತು ಸುರಕ್ಷತೆಗೆ ಬೇಕಾದ ಮೂಲಸೌಲಭ್ಯಗಳನ್ನು ಒದಗಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT