ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಆತಂಕ ಹೆಚ್ಚಿಸಿದ ಕೋವಿಡ್ ಪ್ರಕರಣಗಳ ಏರಿಕೆ

Last Updated 27 ಜೂನ್ 2021, 14:52 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹಾಗೂ ಸಾವಿನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆತಂಕ ಉಂಟಾಗಿದೆ. ಸಾವಿನ ಸಂಖ್ಯೆ ಏರಲು ಅಂಕಿ ಅಂಶಗಳ ಪರಿಷ್ಕರಣೆ ಕಾರಣವಾಗಿದ್ದರೂ ಸಹಜವಾಗಿ ಚಿಂತನೆಗೆ ಕಾರಣವಾಗಿದೆ.

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆಯ ತೀವ್ರತೆ ಈಗ ಕುಗ್ಗಿದೆ. ಆದರೆ, ಮೂರನೇ ಅಲೆ ಆವರಿಸುವ ಆತಂಕವಿದೆ. ಇಂಥ ಸ್ಥಿತಿಯಲ್ಲಿ ಸದ್ಯ ಪ್ರಕರಣಗಳು ಹೆಚ್ಚದಂತೆ ತಡೆಯುವುದು ಅಗತ್ಯವಾಗಿದೆ ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.

ರಾಜ್ಯದಲ್ಲಿ ನೂತನ ರೂಪಾಂತರಿ ಸೋಂಕು ಡೆಲ್ಟಾ ಪ್ಲಸ್‌ನ 21 ಪ್ರಕರಣ ಪತ್ತೆಯಾಗಿವೆ. ಇದು, ಮೂರನೇ ಅಲೆಯಲ್ಲಿ ಹೆಚ್ಚುವ ಅಂದಾಜು ಇದೆ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರ ನಿರ್ಬಂಧಗಳನ್ನು ಇನ್ನಷ್ಟು ಬಲಪಡಿಸಲು ಮುಂದಾಗಿದೆ.

ಜೂನ್‌ 26ರಂದು ರಾಜ್ಯದಲ್ಲಿ 9,812 ಹೊಸ ಪ್ರಕರಣ ವರದಿಯಾಗಿದ್ದು, 179 ಮಂದಿ ಮೃತಪಟ್ಟಿದ್ದರು. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ ಕ್ರಮವಾಗಿ 60,26,847 ಮತ್ತು 1,20,881 ಆಗಿದೆ.

ರಾಜ್ಯ ಆರೋಗ್ಯ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಜೂನ್‌ 1 ರಿಂದ 26ರ ಅವಧಿಯಲ್ಲಿ ರಾಜ್ಯದಲ್ಲಿ 2,65,832 ಪ್ರಕರಣ ವರದಿಯಾಗಿದ್ದರೆ, 24,683 ಸಾವುಗಳು ಸಂಭವಿಸಿವೆ. ಜೂನ್‌ 1ರಂದು 2.30 ಲಕ್ಷ ಸಕ್ಷಿಯ ಪ್ರಕರಣಗಳಿದ್ದರೆ, ಜೂನ್ 26ರಂದು 1.21 ಲಕ್ಷ ಪ್ರಕರಣಗಳಿದ್ದವು.

ಈ ಮಧ್ಯೆ, ರಾಜ್ಯ ವಿಧಾನಸಭೆಯ ಮುಂಗಾರು ಅಧಿವೇಶನ ಜುಲೈ 5–6ರಂದು ನಡೆಯಲಿದ್ದು, ಕೋವಿಡ್‌ ನಿಯಂತ್ರಣ ಕುರಿತ ಮುಂದಿನ ಕ್ರಮಗಳ ಕುರಿತು ತೀರ್ಮಾನಿಸುವ ಸಂಭವವಿದೆ.

ಇದನ್ನೂ ಓದಿ... ಕೋವಿಡ್‌ ಪೀಡಿತ ಮಕ್ಕಳಿಗೆ ಮಾನಸಿಕ, ಸಾಮಾಜಿಕ ಬೆಂಬಲ ಅಗತ್ಯ: ಎನ್‌ಎಚ್‌ಆರ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT