Covid-19 India update: 48,786 ಹೊಸ ಪ್ರಕರಣ, 1,005 ಸಾವು

ನವದೆಹಲಿ: 24 ಗಂಟೆಗಳಲ್ಲಿ ದೇಶದಲ್ಲಿ 48,786 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದೇ ಅವಧಿಯಲ್ಲಿ 1,005 ಮಂದಿ ಕೋವಿಡ್‌ನಿಂದ ಅಸುನೀಗಿದ್ದು, 61,588 ಮಂದಿ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.
ಈ ಮೂಲಕ ದೇಶದಾದ್ಯಂತ ಸೋಂಕಿತರ ಒಟ್ಟು ಸಂಖ್ಯೆ 3,04,11,634ಕ್ಕೆ ಏರಿದೆ. ಈವರೆಗೆ 2,94,88,918 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದ ಈವರೆಗೆ ಮೃತಪಟ್ಟವರ ಒಟ್ಟು ಸಂಖ್ಯೆ 3,99,459 ರಷ್ಟಾಗಿದೆ.
ದೇಶದಲ್ಲಿ ಸದ್ಯ 5,23,257 ಸಕ್ರಿಯ ಪ್ರಕರಣಗಳಿವೆ. ಒಟ್ಟು ಸೋಂಕಿತರ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 1.72 ರಷ್ಟಿದೆ.
ದೇಶದಾದ್ಯಂತ ಈವರೆಗೆ 33,57,16,019 ಡೋಸ್ ಲಸಿಕೆ ವಿತರಿಸಲಾಗಿದೆ.
India reports 48,786 new #COVID19 cases, 61,588 recoveries, and 1,005 deaths in the last 24 hours, as per the Union Health Ministry.
Total cases: 3,04,11,634
Total recoveries: 2,94,88,918
Active cases: 5,23,257
Death toll: 3,99,459Total Vaccination : 33,57,16,019 pic.twitter.com/o1FX1g1Xue
— ANI (@ANI) July 1, 2021
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.