ನವದೆಹಲಿ: ಈಗಿರುವ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳಿಗೆ ಅನುಗುಣವಾಗಿ ಗಡಿ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ಮತ್ತು ಸಂಧಾನಗಳನ್ನು ನಡೆಸಲು ಒಪ್ಪಿಕೊಂಡಿರುವುದಾಗಿ ಭಾರತ – ಚಿನಾ ದೇಶಗಳ ನಡುವಿನ 12 ನೇ ಸುತ್ತಿನ ಮಾತುಕತೆ ಬಳಿಕ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಜುಲೈ 31 ರಂದು, ಭಾರತ ಮತ್ತು ಚೀನಾ ಸೇನಾ ಪ್ರತಿನಿಧಿಗಳು ಲಡಾಖ್ ಪ್ರದೇಶದ ಮೊಲ್ಡೊದಲ್ಲಿನ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಸುಮಾರು ಒಂಬತ್ತು ಗಂಟೆಗಳ ಕಾಲ ಚರ್ಚಿಸಿದರು.
ಜುಲೈ 14 ರಂದು ದುಶಾಂಬೆಯಲ್ಲಿ ಭಾರತ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ವಿದೇಶಾಂಗ ಮಂತ್ರಿಗಳ ಸಭೆ ಹಾಗೂ ಜೂನ್ 25 ರಂದು ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನೆ ಮತ್ತು ಸಮನ್ವಯಕ್ಕಾಗಿ ನಡೆದ 22 ನೇ ಸಭೆಯ ನಂತರ ಈ ಸುತ್ತಿನ ಸಭೆ ನಡೆಸಲಾಗಿದೆ ಎಂದು ಭಾರತೀಯ ಸೇನೆಯು ಹೇಳಿದೆ.
‘ಭಾರತ-ಚೀನಾ ಗಡಿ ಪ್ರದೇಶಗಳ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸೇನೆ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಆಳವಾದ ಅಭಿಪ್ರಾಯಗಳ ವಿನಿಮಯವನ್ನು ಮಾಡಿಕೊಂಡಿವೆ.’ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಈ ಸುತ್ತಿನ ಸಭೆಯು ರಚನಾತ್ಮಕವಾಗಿದೆ ಎಂದು ಉಭಯ ದೇಶಗಳು ಒಪ್ಪಿವೆ ಎಂದು ಸೇನೆ ಹೇಳಿದೆ. ಇದು ಪರಸ್ಪರ ತಿಳುವಳಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈಗಿರುವ ಒಪ್ಪಂದಗಳು ಮತ್ತು ಪ್ರೋಟೋಕಾಲ್‌ಗಳ ಅನುಸಾರವಾಗಿ ಉಳಿದಿರುವ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಮಾತುಕತೆಯ ವೇಗವನ್ನು ಕಾಯ್ದುಕೊಳ್ಳಲು ಅವರು ಒಪ್ಪಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.