ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಜೂಸ್ ಕಂಪನಿಯ 2,500 ಉದ್ಯೋಗಿಗಳು ಮನೆಗೆ

Last Updated 12 ಅಕ್ಟೋಬರ್ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಜನಪ್ರಿಯ ಶೈಕ್ಷಣಿಕ ಆ್ಯಪ್ ಬೈಜೂಸ್ ಇಂಡಿಯಾ ಸುಮಾರು 2,500 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ತಿಳಿಸಿದೆ.

ಕಂಪನಿಯನ್ನು ಲಾಭದತ್ತ ಕೊಂಡೊಯ್ಯಲು ಈ ಕ್ರಮ ಕೈಗೊಂಡಿರುವುದಾಗಿ ಟೈಗರ್ ಗ್ಲೋಬಲ್ ಒಡೆತನದ ಬೈಜೂಸ್ ಕಂಪನಿ ತಿಳಿಸಿದೆ.

2021 ರಲ್ಲಿ ಹೆಚ್ಚಿನ ಸಂಬಳ ಹಾಗೂ ಉನ್ನತ ಪ್ರಚಾರಕ್ಕಾಗಿ ಕಂಪನಿ ₹4,500 ಕೋಟಿ ರೂಪಾಯಿ ನಷ್ಟ ಅನುಭವಿಸಿತ್ತು. ಸದ್ಯ ಕಂಪನಿಯಲ್ಲಿ 50 ಸಾವಿರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ನಾವು ಸುಸ್ಥಿರ ಅಭಿವೃದ್ಧಿಗಾಗಿ ಕೆಲ ಉದ್ಯೋಗಿಗಳನ್ನು ವಜಾ ಮಾಡುವ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿಯ ಸಿಇಒ ಮೃಣಾಲ್ ಮೋಹಿತ್ ತಿಳಿಸಿದ್ದಾರೆ. ಕಂಪನಿ ಇತ್ತೀಚೆಗೆ ಆಕಾಶ್ ಕೋಚಿಂಗ್ ಸೇರಿದಂತೆ ಅನೇಕ ಶೈಕ್ಷಣಿಕ ಕಂಪನಿಗಳನ್ನು ಸುಮಾರು 2.5 ಬಿಲಿಯನ್ ಡಾಲರ್ ವ್ಯಯಿಸಿ ಖರೀದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT