ಭಾನುವಾರ, ಫೆಬ್ರವರಿ 28, 2021
31 °C

ಭಾರತಕ್ಕೆ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿದೆ: ನರೇಂದ್ರ ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯವಿದೆ. ಅದು ಕೊರೊನಾ ವೈರಸ್‌ ಸಮಸ್ಯೆಯೇ ಆಗಿರಲಿ, ಗಡಿ ಸಮಸ್ಯೆಯೇ ಆಗಿರಲಿ. ಇದನ್ನು ಭಾರತ ಕಳೆದ ವರ್ಷ ಸಾಬೀತು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದರು.

ದೆಹಲಿಯಲ್ಲಿ ರಾಷ್ಟ್ರೀಯ ಎನ್‌ಸಿಸಿ ರ‍್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಸ್ವದೇಶಿ ಕೋವಿಡ್‌ ಲಸಿಕೆಯನ್ನು ಸಿದ್ಧಪಡಿಸಿ ಕೋವಿಡ್‌ ವಿರುದ್ಧ ಹೋರಾಡಿದೆ. ಅಲ್ಲದೆ ಭಾರತಕ್ಕೆ ಸವಾಲೆಸೆದವರ ಆಧುನಿಕ ಕ್ಷಿಪಣಿಗಳನ್ನು ನಾಶಪಡಿಸುವ ಮೂಲಕ ತನ್ನ ಸಾಮರ್ಥ್ಯವನ್ನು ತೋರಿಸಿದೆ. ಭಾರತದ ಪ್ರತಿಯೊಂದು ಕ್ಷೇತ್ರಕ್ಕೂ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಲು ಸಾಮರ್ಥ್ಯವಿದೆ’ ಎಂದರು.

‘ಭಾರತ ಲಸಿಕೆಯಲ್ಲಿ ‘ಆತ್ಮ ನಿರ್ಭರ್‌’ ಆಗಿದೆ. ಅದೇ ರೀತಿ ಆಧುನಿಕ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಹುರುಪು ನಮಗಿದೆ. ನಮ್ಮ ದೇಶದ ಶಸ್ತ್ರಾಸ್ತ್ರ ಪಡೆಯ ಪ್ರತಿಯೊಂದು ವಿಭಾಗವನ್ನು ಇನ್ನಷ್ಟು ಬಲಿಷ್ಠಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗ ಭಾರತದ ಬಳಿ ಅತ್ಯುತ್ತಮ ಯುದ್ದೋಪಕರಣಗಳೂ ಇವೆ’ ಎಂದು ಅವರು ತಿಳಿಸಿದರು.

‘ಮುಂದಿನ ದಿನಗಳಲ್ಲಿ ಕೇವಲ ದೊಡ್ಡ ಮಾರುಕಟ್ಟೆಗೆ ಮಾತ್ರವಲ್ಲದೇ ಭಾರತವು ರಕ್ಷಣಾ ಸಾಧನಗಳ ದೊಡ್ಡ ಉತ್ಪಾದಕ ಎಂಬ ಹೆಸರನ್ನು ಗಳಿಸಲಿದೆ’ ಎಂದು ಅವರು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು