ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಗಿಲಾನಿ ದೇಹವನ್ನು ಪಾಕ್‌ ಧ್ವಜದಿಂದ ಸುತ್ತಿದ ಆರೋಪ: ಕುಟುಂಬಸ್ಥರ ವಿರುದ್ಧ ಪ್ರಕರಣ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸೈಯದ್‌ ಅಲಿ ಶಾ ಗಿಲಾನಿ ಅವರು ನಿಧನರಾದಾಗ, ದೇಶ ವಿರೋಧಿ ಘೋಷಣೆಗಳನ್ನು ಕೂಗಿದ ಮತ್ತು ಅವರ ಪಾರ್ಥೀವ ಶರೀರವನ್ನು ಪಾಕಿಸ್ತಾನದ ಧ್ವಜದಿಂದ ಸುತ್ತಿದ್ದ ಆರೋಪದ ಮೇರೆಗೆ ಗಿಲಾನಿ ಕುಟುಂಬದ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

92 ವರ್ಷದ ಗಿಲಾನಿ ಅವರು ಬುಧವಾರ ನಿಧನರಾಗಿದ್ದರು. ಪೊಲೀಸರು ಅವರ ಕುಟುಂಬದವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ (ಯುಎಪಿಎ) ಶನಿವಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.

ಈ ಆರೋಪಗಳನ್ನು ನಿರಾಕರಿಸದ ಗಿಲಾನಿ ಅವರ ಪುತ್ರ ನಸೀಮ್‌ ಗಿಲಾನಿ ಅವರು, ‘ತಂದೆಯ ಮೃತದೇಹವನ್ನು ಮಧ್ಯರಾತ್ರಿ ಅಂತ್ಯಕ್ರಿಯೆ ನಡೆಸಲು ಪೊಲೀಸರು ತೆಗೆದುಕೊಂಡರು. ಅಲ್ಲದೆ ಕುಟುಂಬದವರಿಗೆ ಅಂತಿಮ ಸಂಸ್ಕಾರ ಮಾಡಲು ಅನುಮತಿ ನೀಡಲಿಲ್ಲ’ ಎಂದು ಪುನರುಚ್ಚರಿಸಿದ್ದಾರೆ. ಆದರೆ ಪೊಲೀಸರು ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು