ಸೋಮವಾರ, ಆಗಸ್ಟ್ 15, 2022
26 °C
ಸ್ಟಾಕ್‌ಹೋಮ್‌ನ ಸಿಪಿಆರ್‌ಐ ಸಂಸ್ಥೆಯ ಅಧ್ಯಯನದಿಂದ ಬಹಿರಂಗ

ಪರಮಾಣು ಶಸ್ತ್ರಾಸ್ತ್ರ ವಿಸ್ತರಿಸುತ್ತಿರುವ ಭಾರತ, ಚೀನಾ, ಪಾಕಿಸ್ತಾನ: ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವರ್ಷದ ಜನವರಿಯ ಹೊತ್ತಿಗೆ ಚೀನಾ, ಪಾಕಿಸ್ತಾನ ಮತ್ತು ಭಾರತ ಕ್ರಮವಾಗಿ 350, 165 ಮತ್ತು 156 ಪರಮಾಣು ಸಿಡಿತಲೆಗಳನ್ನು ಹೊಂದಿವೆ. ಈ ಮೂಲಕ ಮೂರು ರಾಷ್ಟ್ರಗಳೂ ಪರಮಾಣು ಶಸ್ತ್ರಾಸ್ತ್ರಗಳನ್ನು ವಿಸ್ತರಿಸುತ್ತಿರುವಂತೆ ಕಂಡುಬರುತ್ತಿರುವುದಾಗಿ ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್‌ ರೀಸರ್ಜ್‌ ಇನ್‌ಸ್ಟಿಟ್ಯೂಟ್‌ (ಎಸ್‌ಐಪಿಆರ್‌ಐ–ಸಿಪ್ರೈ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.

ಈ ಅಧ್ಯಯನದಲ್ಲಿರುವ ಮಂಡಿಸಿರುವ ವಿಶ್ಲೇಷಣೆ ಪ್ರಕಾರ, ವಿಶ್ವದಲ್ಲಿರುವ ಅಂದಾಜು 13,080 ಜಾಗತಿಕ ಪರಮಾಣು ಶಸ್ತ್ರಾಸ್ತ್ರದಲ್ಲಿ ಶೇಕಡ 90ರಷ್ಟು ಭಾಗವನ್ನು ರಷ್ಯಾ ಮತ್ತು ಅಮೆರಿಕ ಹೊಂದಿವೆ ಎಂದು ಹೇಳಲಾಗಿದೆ.

ಕಳೆದ ವರ್ಷದ ಜನವರಿಯಲ್ಲಿ, ಚೀನಾ, ಪಾಕಿಸ್ತಾನ ಮತ್ತು ಭಾರತ ಕ್ರಮವಾಗಿ 320, 160 ಮತ್ತು 150 ಪರಮಾಣು ಸಿಡಿತಲೆಗಳನ್ನು ಹೊಂದಿದ್ದವು ಎಂದು ಸಿಪ್ರೈ ಅಧ್ಯಯನ ಸೋಮವಾರ ತಿಳಿಸಿದೆ.

ವಿಶ್ವದ ಒಂಬತ್ತು ರಾಷ್ಟ್ರಗಳು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿವೆ. ಅವುಗಳೆಂದರೆ, ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್‌, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ.

ಇದನ್ನೂ ಓದಿ... ಚೀನಾ ಪರಮಾಣು ಘಟಕದ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ ಹಾಂಗ್‌ಕಾಂಗ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು