ನವದೆಹಲಿ: ಭಾರತವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್ 6 ರವರೆಗೆ ₹13,399 ಕೋಟಿ ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಅನ್ನು ರಫ್ತು ಮಾಡಿದೆ. 2017-18ರಲ್ಲಿ ಈ ಪ್ರಮಾಣ ಕೇವಲ ₹4,682 ಕೋಟಿಯಾಗಿತ್ತು ಎಂದು ಅಧಿಕೃತ ಅಂಕಿ ಅಂಶಗಳಿಂದ ಗೊತ್ತಾಗಿದೆ.
ಮಿಲಿಟರಿ ಹಾರ್ಡ್‌ವೇರ್‌ನ ವರ್ಷವಾರು ರಫ್ತಿನ ವಿವರಗಳನ್ನು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದರು.
2021-22ರಲ್ಲಿ ಒಟ್ಟು ರಕ್ಷಣಾ ರಫ್ತು ₹12,815 ಕೋಟಿಗಳಾಗಿದ್ದರೆ, 2020-21ರಲ್ಲಿ ₹8,435 ಕೋಟಿಯಾಗಿತ್ತು. 2019-20ರಲ್ಲಿ ₹9,116 ಕೋಟಿ, 2018-19ರಲ್ಲಿ ₹10,746 ಕೋಟಿ, 2017-18ರಲ್ಲಿ ಈ ಮೊತ್ತ ₹4,682 ಕೋಟಿಯಾಗಿತ್ತು ಎಂದು ಭಟ್ ತಿಳಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಮಾರ್ಚ್ 6ರವರೆಗೆ ರಕ್ಷಣಾ ರಫ್ತುಗಳ ಒಟ್ಟು ಮೌಲ್ಯ ₹13,399 ಕೋಟಿಗಳಾಗಿದೆ ಎಂದು ಸಚಿವರು ಹೇಳಿದರು.
"ಆತ್ಮನಿರ್ಭರ" (ಸ್ವಾವಲಂಬನೆ) ಸಾಧಿಸಲು ವಿವಿಧ ರಕ್ಷಣಾ ವಸ್ತುಗಳ ಸ್ವದೇಶೀಕರಣಕ್ಕೆ ಸರ್ಕಾರವು ಗಮನ ನೀಡಿದೆ. ಸ್ಥಳೀಯ ಸಂಪನ್ಮೂಲಗಳಿಂದ ತಯಾರಿಸಿದ ವಸ್ತುಗಳು ಜಾಗತಿಕವಾಗಿ ಸ್ಪರ್ಧೆಯೊಡ್ಡಿವೆ. ಇವು ಜಾಗತಿಕ ಪೂರೈಕೆ ಸರಪಳಿಯಲ್ಲಿ ಎಂಎಸ್‌ಎಂಇಗಳ ಏಕೀಕರಣವನ್ನು ಸರಳಗೊಳಿಸಲಿದೆ’ ಎಂದು ಭಟ್ ಹೇಳಿದರು.
ಇವುಗಳನ್ನು ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.