ಬುಧವಾರ, ಜನವರಿ 19, 2022
27 °C

ಭಾರತದಿಂದ 100 ದೇಶಗಳಿಗೆ 6.5 ಕೋಟಿ ಡೋಸ್‌ ಕೋವಿಡ್‌ ಲಸಿಕೆ ರಫ್ತು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಸಕ್ತ ವರ್ಷ ಭಾರತ ಸುಮಾರು 100 ದೇಶಗಳಿಗೆ 6.5 ಕೋಟಿಯಷ್ಟು ಕೋವಿಡ್‌ ಲಸಿಕೆಯನ್ನು ರಫ್ತು ಮಾಡಿದೆ ಎಂದು ಪ್ರಧಾನಿ ಮೋದಿ ಗುರುವಾರ ಹೇಳಿದ್ದಾರೆ.

ಭಾರತೀಯ ಆರೋಗ್ಯ ವಲಯವು ಗಳಿಸಿರುವ ಜಾಗತಿಕ ನಂಬಿಕೆಯಿಂದ ದೇಶವನ್ನು ಈಗ  ‘ಜಗತ್ತಿನ ಔಷಧಾಲಯ’ ಎಂದು ಕರೆಯಲು ಸಾಧ್ಯವಾಗಿದೆ ಎಂದೂ ಅವರು ಹೇಳಿದರು. ಔಷಧ ವಲಯದ ಮೊದಲ ಜಾಗತಿಕ ನಾವೀನ್ಯತೆ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯಮವನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿರುವ ವಿಜ್ಞಾನಿಗಳು ಮತ್ತು ತಂತ್ರಜ್ಞರ ದೊಡ್ಡ ಸಮೂಹವನ್ನು ಭಾರತ ಹೊಂದಿದೆ. ಭಾರತದಲ್ಲಿ ಅನ್ವೇಷಿಸಲು ಮತ್ತು ತಯಾರಿಸಲು ಈ ಸಾಮರ್ಥ್ಯ ಬಳಸಿಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು. 

‘ಇಂದು ಭಾರತದ 103 ಕೋಟಿ ಜನರು ಭಾರತವನ್ನು ಆತ್ಮನಿರ್ಭರವನ್ನು ಮಾಡಲು ಹೊರಟಿರುವಾಗ ಲಸಿಕೆಗಳು ಮತ್ತು ಔಷಧಿಗಳ ಪ್ರಮುಖ ಪದಾರ್ಥಗಳ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವತ್ತ ನಾವು ಯೋಚಿಸಬೇಕಿದೆ. ದೇಶ ಇದನ್ನು ಅಳವಡಿಸಿಕೊಳ್ಳಬೇಕಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು