ಶನಿವಾರ, ಜುಲೈ 2, 2022
26 °C

ಡಬ್ಲ್ಯುಟಿಒ ನಿರ್ಬಂಧಗಳಿಂದ ತೊಂದರೆ ಎದುರಿಸುತ್ತಿರುವ ಭಾರತ: ಸಚಿವೆ ನಿರ್ಮಲಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ರಷ್ಯಾ – ಉಕ್ರೇನ್‌ ಯುದ್ಧದಂತಹ ಸಮಯದಲ್ಲಿ ವಿಶ್ವವು ಆಹಾರಧಾನ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಆದರೆ ಆಹಾರ ಧಾನ್ಯಗಳನ್ನು ಪೂರೈಸುವ ಸಾಮರ್ಥ್ಯವಿದ್ದರೂ ವಿಶ್ವ ವ್ಯಾಪಾರ ಸಂಘಟನೆಯಿಂದ ಭಾರತದಂತಹ ದೇಶಗಳು ತೊಂದರೆ ಎದುರಿಸುತ್ತಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್‌ನ ಜಂಟಿ ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ಸಚಿವೆ ನಿರ್ಮಲಾ, ‘ವಿಶ್ವ ವ್ಯಾಪಾರ ಸಂಘಟನೆಗಳ ಮಹಾನಿರ್ದೇಶಕ ಎನ್‌ಗೋಜಿ ಒಕೊಂಜಾ ಇವಾಲಾ ಅವರು, ಆಹಾರ ಕೊರತೆಯನ್ನು ಅನುಭವಿಸುತ್ತಿರುವ ದೇಶಗಳಿಗೆ ಭಾರತವು ಧಾನ್ಯಗಳನ್ನು ಪೂರೈಸುವುದರ ಕುರಿತು ಸಕಾರಾತ್ಮಕವಾಗಿ ಯೋಚಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ’ ಎಂದು ಭಾರತದ ಪತ್ರಕರ್ತರಿಗೆ ತಿಳಿಸಿದರು.

‘ಡಬ್ಲ್ಯುಟಿಒದ ಪ್ರತಿಕ್ರಿಯೆ ಸಕಾರಾತ್ಮಕವಾಗಿದೆ. ಆಹಾರ ಧಾನ್ಯಗಳಿಗೆ ಸಂಬಂಧಿಸಿದಂತೆ ದಶಕಗಳಿಂದ ನಮ್ಮನ್ನು ಕಟ್ಟಿಹಾಕಿದ್ದ ನಿರ್ಬಂಧ ಗಳನ್ನು ಭಾರತ ಮುರಿಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಿಂದ ನಮ್ಮ ರೈತರಿಗೆ ಅನುಕೂಲವಾಗಲಿದೆ’ ಎಂದು ನಿರ್ಮಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ಭಾರತ ಹಾಗೂ ಅಮೆರಿಕಾದ ಸಂಬಂಧದ ಬಗ್ಗೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್‌,  ‘ಭಾರತ ಹಾಗೂ ಅಮೆರಿಕಾದ ದ್ವಿಪಕ್ಷೀಯ ಸಂಬಂಧವು ಮುಂದುವರಿದಿದ್ದು, ತುಂಬಾ ಗಾಢವಾಗಿದೆ. ಈ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು