ಭಾರತ–ಫ್ರಾನ್ಸ್ ನೌಕಾ ಪಡೆಯ ಜಂಟಿ ಕವಾಯತು ಆರಂಭ

ನವದೆಹಲಿ: ಭಾರತ ಮತ್ತು ಫ್ರಾನ್ಸ್ ನೌಕಾಪಡೆಯ 21ನೇ ಜಂಟಿ ಕವಾಯತು ಪಶ್ಚಿಮ ಸಮುದ್ರತೀರದಲ್ಲಿ ಸೋಮವಾರ ಆರಂಭಗೊಂಡಿದೆ ಎಂದು ನೌಕಾಪಡೆ ಹೇಳಿದೆ.
1993ರಲ್ಲಿ ಆರಂಭವಾದ ಈ ಜಂಟಿ ಕವಾಯತಿಗೆ 2001ರಲ್ಲಿ ‘ವರುಣಾ’ ಎಂದು ನಾಮಕರಣ ಮಾಡಲಾಯಿತು. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಹಕಾರ ವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದೂ ಹೇಳಿಕೆಯಲ್ಲಿ ತಿಳಿಸಿದೆ.
ದೇಶೀಯವಾಗಿ ನಿರ್ಮಿಸಲಾಗಿರುವ ಐಎನ್‌ಎಸ್ ಚೆನ್ನೈ, ಐಎನ್‌ಎಸ್ ಟೆಗ್ ಸಮರ ನೌಕೆಗಳು ಹಾಗೂ ಫ್ರಾನ್ಸ್‌ನ ನೌಕಾಪಡೆಯ ವಿಮಾನವಾಹಕ ನೌಕೆ ಚಾರ್ಲ್ಸ್ ಡಿ ಗೌಲ್ ಭಾಗಿಯಾಗಿವೆ ಎಂದೂ ವಿವರಿಸಿದೆ.
ಈ ಕವಾಯತು ಜನವರಿ 20ರ ವರೆಗೆ ನಡೆಯಲಿದೆ ಎಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.