ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ವ್ಯವಸ್ಥೆ ಮೂಲಕ ‘ಕ್ಯೂ’ಗೆ ವಿದಾಯ– ಪ್ರಧಾನಿ ಮೋದಿ ಶ್ಲಾಘನೆ

Last Updated 4 ಜುಲೈ 2022, 14:43 IST
ಅಕ್ಷರ ಗಾತ್ರ

ಗಾಂಧಿನಗರ (ಗುಜರಾತ್): ಡಿಜಿಟಲ್ ತಂತ್ರಜ್ಞಾನದಿಂದಾಗಿ ದೇಶದ ಜನರ ಜೀವನದಲ್ಲಿ ಬದಲಾವಣೆಯಾಗಿರುವುದನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ ಅವರು, ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ಆನ್‌ಲೈನ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಜನರನ್ನು ಸರತಿಸಾಲಿನಲ್ಲಿ (ಕ್ಯೂ) ನಿಲ್ಲುವುದನ್ನು ತಪ್ಪಿಸಲಾಗಿದೆ ಎಂದು ಸೋಮವಾರ ಹೇಳಿದ್ದಾರೆ.

ಇಲ್ಲಿ ನಡೆದ ‘ಡಿಜಿಟಲ್ ಇಂಡಿಯಾ ಸಪ್ತಾಹ 2022’ ಉದ್ಘಾಟಿಸಿ ಮಾತನಾಡಿದ ಅವರು, ‘ಕಾಲಕ್ಕೆ ತಕ್ಕಂತೆ ಭಾರತವು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳದೇ ಹೋಗಿದ್ದರೆ, ದೇಶವು ಹಿಂದುಳಿಯುತ್ತಿತ್ತು. ದೇಶವು ಇಂಥ ಪರಿಸ್ಥಿತಿಯನ್ನು ಮೂರನೇ ಕೈಗಾರಿಕಾ ಕ್ರಾಂತಿಯ ವೇಳೆ ಅನುಭವಿಸಿದೆ’ ಎಂದು ತಿಳಿಸಿದ್ದಾರೆ.

‘ಎಂಟ್ಹತ್ತು ವರ್ಷಗಳ ಹಿಂದೆ, ಪ್ರತಿಯೊಂದಕ್ಕೂ ನಾವು ಸರತಿಸಾಲಿನಲ್ಲಿ ನಿಲ್ಲಬೇಕಿತ್ತು. ಜನನ ಪ್ರಮಾಣ ಪತ್ರ, ಬಿಲ್ ಪಾವತಿ, ರೇಷನ್ ಪಡೆಯಲು, ಶಾಲಾ ಪ್ರವೇಶ, ಪರೀಕ್ಷಾ ಫಲಿತಾಂಶ, ಪ್ರಮಾಣಪತ್ರ ‍ಪಡೆಯಲು, ಬ್ಯಾಂಕುಗಳಲ್ಲೂ ಕೂಡಾ ನಾವು ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತಿತ್ತು. ಆದರೆ, ಆನ್‌ಲೈನ್ ವ್ಯವಸ್ಥೆ ಅಳವಡಿಸಿಕೊಂಡ ಮೇಲೆ ಭಾರತವು ಆ ಎಲ್ಲಾ ಸರತಿಸಾಲುಗಳನ್ನು ಅಳಿಸಿಹಾಕಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

‘ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮವಾಗಿರುವ ‘ಡಿಜಿಟಲ್ ಇಂಡಿಯಾ’ವು ಬಡವರಿಗೆ ಭ್ರಷ್ಟಾಚಾರದಿಂದ ಮುಕ್ತಿ ನೀಡಿದೆ. ಅಷ್ಟೇ ಅಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಇರುವ ಮಧ್ಯವರ್ತಿಗಳ ಹಾವಳಿಯ ನಿರ್ಮೂಲನೆಗೆ ಶ್ರಮಿಸುತ್ತಿದೆ’ ಎಂದೂ ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT