ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಸಾಧಿಸುತ್ತಿರುವ ಪಾಕ್‌: ಭಾರತ ಟೀಕೆ

Last Updated 7 ಫೆಬ್ರುವರಿ 2023, 15:16 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ (ಯುಎನ್‌ಜಿಎ) ಪ್ರಸ್ತಾಪಿಸಿದ್ದಕ್ಕೆ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತವು, ‘ಪಾಕಿಸ್ತಾನವು ನೆರೆಯ ರಾಜ್ಯದ ಮೇಲೆ ಸಂಘಟಿತವಾಗಿ ದ್ವೇಷ ಸಾಧಿಸುತ್ತಿದೆ’ ಎಂದು ಆರೋಪಿಸಿದೆ.

‘ಪಾಕಿಸ್ತಾನವು ಪದೇ ಪದೇ ಭಾರತದ ಬಗ್ಗೆ ಸುಳ್ಳು ಹೇಳುತ್ತಿದೆ’ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಕೌನ್ಸೆಲರ್ ರಾಜೇಶ್‌ ಪರಿಹಾರ್ ಹೇಳಿದ್ದಾರೆ.

‘ನನ್ನ ದೇಶದ ವಿರುದ್ಧ ಪಾಕಿಸ್ತಾನ ಪ್ರತಿನಿಧಿ ಮಾಡಿರುವ ಕ್ಷುಲ್ಲಕ ಟೀಕೆಗಳಿಗೆ ಪ್ರತಿಕ್ರಿಯಿಸದೇ ಇರಲು ಸಾಧ್ಯವಿಲ್ಲ ಮತ್ತು ಪದೇ ಪದೇ ಸುಳ್ಳು ಹೇಳುವ ಅವರ ಮನಸ್ಥಿತಿಗೆ ಸಹಾನುಭೂತಿ ಇದೆ’ ಎಂದಿದ್ದಾರೆ.

‘ಕೇಂದ್ರಾಡಳಿತ ಪ್ರದೇಶಗಳಾಗಿರುವ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‌ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT