ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಸುರಕ್ಷಿತ: ಜೆ.ಪಿ. ನಡ್ಡಾ

Last Updated 21 ಆಗಸ್ಟ್ 2021, 10:49 IST
ಅಕ್ಷರ ಗಾತ್ರ

ಡೆಹ್ರಾಡೂನ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಸುರಕ್ಷಿತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಶನಿವಾರ ಹೇಳಿದ್ದಾರೆ. ಎರಡು ದಿನಗಳ ಭೇಟಿ ಸಲುವಾಗಿ ಉತ್ತರಾಖಂಡಕ್ಕೆ ಆಗಮಿಸಿರುವ ನಡ್ಡಾ, ರಾಯ್‌ವಾಲಾದಲ್ಲಿ ನಡೆದ ʼಸೈನಿಕ ಸಮ್ಮಾನ್‌ ಕಾರ್ಯಕ್ರಮದಲ್ಲಿ, ಭಾರತೀಯ ಸೇನೆಯ ಯೋಧರನ್ನುದ್ದೇಶಿಸಿ ಮಾತನಾಡಿದರು.

ʼಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶವು ಸುರಕ್ಷಿತ, ಬಲಿಷ್ಠ ಮತ್ತು ವೇಗವಾಗಿ ಮುನ್ನಡೆಯಲು ಸಜ್ಜಾಗಿದೆʼ ಎಂದು ನಡ್ಡಾ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಅಧಿಕಾರದಲ್ಲಿದ್ದ ಯುಪಿಎ, ರಕ್ಷಣಾ ಕ್ಷೇತ್ರವನ್ನು ಸುಧಾರಣೆ ಮಾಡುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿರುವ ಅವರು, ʼ2011-12ರಲ್ಲಿ ದೇಶದ ರಕ್ಷಣಾ ಬಜೆಟ್‌ ₹ 1,43,000 ಕೋಟಿ ಇತ್ತು. 2020-21ರಲ್ಲಿ ರಕ್ಷಣಾ ಬಜೆಟ್‌ ₹ 4,78,000 ಕೋಟಿ ಆಗಿದೆʼ ಎಂದು ತಿಳಿಸಿದ್ದಾರೆ.

ಮುಂದುವರಿದು, ʼ₹ 1,35,000 ಕೋಟಿ ಮೊತ್ತದ ಹೊಸ ಶಸ್ತ್ರಾಸ್ತ್ರ ಖರೀದಿಗೆ ಮೋದಿ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಅವರು (ಮೋದಿ) ರಕ್ಷಣಾ ವಲಯವನ್ನು ಆಧುನೀಕರಣಗೊಳಿಸುವ ಭರವಸೆ ನೀಡಿದ್ದಾರೆʼ ಎಂದಿದ್ದಾರೆ.

ಹಾಗೆಯೇ, ಸೇನಾ ಪಡೆಗೆ ರಾಜ್ಯದ ಕೊಡುಗೆಯನ್ನು ಶ್ಲಾಘಿಸಿರುವ ನಡ್ಡಾ, ʼಉತ್ತರಾಖಂಡವು ದೇವಭೂಮಿ ಮತ್ತು ವೀರಭೂಮಿಯೂ ಹೌದು. ಈ ಭಾಗದ ಪ್ರತಿಯೊಂದು ಮನೆಯಿಂದಲೂ ಜನರು ಸೇನೆಯನ್ನು ಪ್ರತಿನಿಧಿಸುತ್ತಿದ್ದಾರೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ 2022ರಲ್ಲಿ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿರಿಸಿ ರಾಜ್ಯ ಬಿಜೆಪಿ ನಾಯಕರೊಂದಿಗೆ ನಡ್ಡಾ ಸಭೆ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT