ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚ ದೇಶಗಳ ನೌಕಾಪಡೆಯ ಸಾಮರ್ಥ್ಯ ಪ್ರದರ್ಶನ

ಹಿಂದೂ ಮಹಾಸಾಗರದಲ್ಲಿ ಲಾ ಪೆರೌಸ್‌ ಕಾರ್ಯಕ್ರಮ: ಭಾರತ ಸೇರಿ ಐದು ದೇಶಗಳು ಭಾಗಿ
Last Updated 5 ಏಪ್ರಿಲ್ 2021, 14:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪೂರ್ವಹಿಂದೂ ಮಹಾಸಾಗರದಲ್ಲಿ ಮೂರು ದಿನ ಅವಧಿಯ ಐದು ರಾಷ್ಟ್ರಗಳ ನೌಕಾದಳದ ಶಕ್ತಿ ಪ್ರದರ್ಶನ, ಕಸರತ್ತು ಕಾರ್ಯಕ್ರಮ ‘ಲಾ ಪೆರೌಸ್‌’ ಸೋಮವಾರ ಆರಂಭವಾಯಿತು. ಭಾರತ ಹಾಗೂ ಇತರೆ ಮೂರು ಕ್ವಾಡ್ ಸದಸ್ಯ ದೇಶಗಳು ಮತ್ತು ಫ್ರಾನ್ಸ್‌ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿವೆ.

ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯ ಹಡಗುಗಳಾದ ಐಎನ್‌ಎಸ್‌ ಸಾತ್ಪುರ ಮತ್ತು ಐಎನ್‌ಎಸ್‌ ಕಿಲ್ತಾನ್‌ ಹಾಗೂ ಪಿ–8ಐ ದೂರಗಾಮಿ ಕ್ಷಿಪಣಿ ಉಡಾವಣಾ ವಾಹಕಗಳು ಈ ಬಹುಶಿಸ್ತೀಯ ಶಕ್ತಿ ಪ್ರದರ್ಶನ ಕಾರ್ಯಕ್ರಮವಾದ ‘ಲಾ ಪೆರೌಸ್‌’ದಲ್ಲಿ ಭಾಗವಹಿಸುತ್ತಿವೆ.

ಫ್ರಾನ್ಸ್‌, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕದ ನೌಕಾಪಡೆಯ ಹಡಗು, ವಿಮಾನಗಳ ಜೊತೆಗೆ ಭಾರತದ ಹಡಗು, ವಿಮಾನಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ.

ಭಾರತೀಯ ನೌಕಾಪಡೆಯ ವಕ್ತಾರರಾದ ಕಮಾಂಡರ್ ವಿವೇಕ್‌ ಮಾಧ್ವಾಲ್‌ ಅವರು, ಈ ಮೂರು ದಿನಗಳಲ್ಲಿ ವಿವಿಧ ರಕ್ಷಣಾತ್ಮಕ ಕಸರತ್ತುಗಳು ಪ್ರದರ್ಶನವಾಗಲಿವೆ. ಅಲ್ಲದೆ, ಭಾಗಿದಾರ ದೇಶಗಳ ನಡುವಣ ಬಾಂಧವ್ಯ ಮತ್ತು ಸಹಕಾರವೂ ಈ ಮೂರು ದಿನಗಳ ಕಾರ್ಯಕ್ರಮದಲ್ಲಿ ಬಿಂಬಿತವಾಗಲಿವೆ ಎಂದರು.

ಭಾರತೀಯ ನೌಕಾಪಡೆಯ ಈ ಭಾಗವಹಿಸುವಿಕೆಯು ಸ್ನೇಹಿ ರಾಷ್ಟ್ರಗಳ ನೌಕಾಪಡೆಯ ಜೊತೆಗೆ ಅಂತರರಾಷ್ಟ್ರೀಯ ಆದೇಶಗಳ ಅನುಸಾರ ಸಮುದ್ರ ಮಾರ್ಗಗಳ ಹಂಚಿಕೆ ಮತ್ತು ಬದ್ಧತೆಯ ಮುಕ್ತ ಅವಕಾಶಗಳನ್ನು ಒದಗಿಸಲಿದೆ. ಫ್ರಾನ್ಸ್‌ ಹೊರತುಪಡಿಸಿ ಉಳಿದ ನಾಲ್ಕು ‘ಕ್ವಾಡ್‌’ ಸದಸ್ಯ ರಾಷ್ಟ್ರಗಳಾಗಿವೆ.

ಭಾರತವು ಅಮೆರಿಕ, ಜಪಾನ್‌, ಆಸ್ಟ್ರೇಲಿಯ, ಫ್ರಾನ್ಸ್‌ ರಾಷ್ಟ್ರಗಳ ನೌಕಾಪಡೆಯ ಜೊತೆಗೆ ಕಳೆದ ಕೆಲವು ವರ್ಷಗಳಿಂದ ಸಹಕಾರ ಬಾಂಧವ್ಯವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT