ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಭಾರತಕ್ಕಾಗಿ 10 ಕೋಟಿ ಡೋಸ್

ಕೋವಿಡ್‌ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಸೆರಂ ಸಂಸ್ಥೆ ಚಿಂತನೆ
Last Updated 14 ನವೆಂಬರ್ 2020, 2:58 IST
ಅಕ್ಷರ ಗಾತ್ರ

ಪುಣೆ: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಆಸ್ಟ್ರಾಜೆನೆಕಾ ಕಂಪನಿಯ ಕೋವಿಡ್ ಲಸಿಕೆಯ ತಯಾರಿಕೆಯನ್ನು ಹೆಚ್ಚಿಸಲು ಸಿದ್ಧತೆ ನಡೆಸಿದೆ. ದೇಶಕ್ಕಾಗಿ ಡಿಸೆಂಬರ್‌ ವೇಳೆಗೆ 10 ಕೋಟಿ ಡೋಸ್‌ಗಳನ್ನು ತಯಾರಿಸುವ ಗುರಿಯನ್ನು ಸಾಧಿಸುವ ಬಗ್ಗೆ ಕಂಪನಿ ಚಿಂತನೆ ನಡೆಸಿದೆ.

ಆಸ್ಟ್ರಾಜೆನೆಕಾ ಕಂಪನಿಯ ಕೋವಿಡ್‌ ಲಸಿಕೆಯು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನಲ್ಲಿ ಇದೆ. ಲಸಿಕೆಯಿಂದ ಸೋಂಕು ನಿಯಂತ್ರಣ ಸಾಧ್ಯವಿದೆ ಎಂಬುದು ಗೊತ್ತಾದರೆ, ತುರ್ತು ಸಂದರ್ಭದಲ್ಲಿ ಲಸಿಕೆಯ ಡೋಸ್‌ಗಳು ಬಳಕೆಯಾಗಬಹುದು ಎಂದು ಕಂಪನಿಯ ಸಿಇಒ ಅದರ್‌ ಪೂನಾವಾಲಾ ಹೇಳಿದ್ದಾರೆ.

ಲಸಿಕೆಯ 100 ಕೋಟಿ ಡೋಸ್‌ಗಳನ್ನು ತಯಾರಿಸಲು ಆಸ್ಟ್ರಾಜೆನೆಕಾದ ಜೊತೆ ಸೆರಂ ಒಪ್ಪಂದ ಮಾಡಿಕೊಂಡಿದೆ. 2 ತಿಂಗಳಲ್ಲಿ ಈಗಾಗಲೇ 4 ಕೋಟಿ ಡೋಸ್‌ಗಳನ್ನು ತಯಾರಿಸಿಕೊಟ್ಟಿದೆ. ಲಸಿಕೆಯಿಂದ ಸೋಂಕು ನಿಯಂತ್ರಣ ಸಾಧ್ಯ ಎಂಬುದು ಗೊತ್ತಾದರೆ, ಲಸಿಕೆಯ ಬಳಕೆಗೆ ಕೇಂದ್ರ ಸರ್ಕಾರವು ಅನುಮತಿ ನೀಡಲಿದೆ. ಆಗ ಭಾರತಕ್ಕಾಗಿ ಲಸಿಕೆಯನ್ನು ತಯಾರಿಸಲಾಗುತ್ತದೆ ಎಂದು ಪೂನಾವಾಲಾ ಹೇಳಿದ್ದಾರೆ.

ಸೆರಂ, ಜಗತ್ತಿನ ಅತ್ಯಂತ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾಗಿದೆ.ಲಸಿಕೆಗಳನ್ನು ತಯಾರಿಸಿಕೊಡಲು ಸೆರಂ ಕಂಪನಿಯು ಜಗತ್ತಿನ ಐದು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದೆ.

‘ಈ ವರ್ಷಾಂತ್ಯಕ್ಕೆ ಲಸಿಕೆ ಲಭ್ಯವಾದರೂ, ಇಡೀ ಜಗತ್ತಿನ ಜನರಿಗೆ ಲಸಿಕೆ ನೀಡಲು ಎರಡೂವರೆ ವರ್ಷವಾಗುತ್ತದೆ. ತಯಾರಿಕಾ ಸಾಮರ್ಥ್ಯ, ಲಸಿಕೆ ತಯಾರಿಕೆಗೆ ಅಗತ್ಯವಿರುವ ಹಣಕಾಸಿನ ಕೊರತೆಯೇ ಈ ವಿಳಂಬಕ್ಕೆ ಕಾರಣ. ಲಸಿಕೆ ನೀಡಿದ ನಂತರ ಸೋಂಕು ಹರಡುವುದು ನಿಯಂತ್ರಣಕ್ಕೆ ಬರಲು ಮತ್ತೆರಡು ವರ್ಷ ಬೇಕಾಗುತ್ತದೆ’ ಎಂದು ಪೂನಾವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT