ಬಿಜೆಪಿಯ ಸುಳ್ಳು ಘೋಷಣೆಗಳು ಬೇಕಾಗಿಲ್ಲ: ರಾಹುಲ್ ಗಾಂಧಿ

ನವದೆಹಲಿ: ‘ಕೇಂದ್ರ ಸರ್ಕಾರದ ನಿಷ್ಕ್ರಿಯತೆಯಿಂದ ಲಸಿಕೆ ಕೊರತೆ ಉಂಟಾಗಿದೆ. ಭಾರತಕ್ಕೆ ತ್ವರಿತ ಮತ್ತು ಸಂಪೂರ್ಣ ವ್ಯಾಕ್ಸಿನೇಷನ್‌ನ ಅಗತ್ಯವಿದೆಯೇ ಹೊರತು ಬಿಜೆಪಿಯ ಸುಳ್ಳು ಘೋಷಣೆಗಳಲ್ಲ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಟೀಕಿಸಿದ್ದಾರೆ.
‘ಕೇಂದ್ರ ಸರ್ಕಾರವು ಪ್ರಧಾನಿಯ ಮೋದಿ ಅವರ ಘನತೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ. ಇದು ಸೋಂಕು ಹರಡಲು ಇನ್ನಷ್ಟು ಅವಕಾಶ ನೀಡುತ್ತಿದೆ ಮತ್ತು ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ’ ಎಂದು ಅವರು ಟ್ವಿಟರ್‌ನಲ್ಲಿ ದೂರಿದ್ದಾರೆ.
ಸರ್ಕಾರವು ವಿಜ್ಞಾನಿಗಳ ಒಪ್ಪಿಗೆಯಿಲ್ಲದೆ ಅಸ್ಟ್ರಾಜೆನೆಕಾ ಕೋವಿಡ್ 19 ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ಹೆಚ್ಚಿಸಿದೆ ಎಂದು ಆರೋಪಿಸಿರುವ ವರದಿಯೊಂದನ್ನು ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.